ಗೌರಸಮುದ್ರ ಮಾರಮ್ಮ ಜಾತ್ರೆಗೆ ಸಿದ್ದತೆ

ಚಳ್ಳಕೆರೆ.ಸೆ.೯;ಸೆ.೧೩ ರಿಂದ 15 ರವರೆಗೆ ನಡೆಯುವ ಗೌರಸಮುದ್ರ  ಮಾರಮ್ಮ ಜಾತ್ರೆಗೆ ತಾಲೂಕು ಮಟ್ಟದ ಅಧಿಕಾರಿಗಳು ಸಿದ್ದರಾಗಿಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ.
ತಾಲ್ಲೂಕು ಕಛೇರಿಯಲ್ಲಿ  ಆಯೋಜಿಸಿದ್ದ ಗೌರಸಮುದ್ರ ಮಾರಮ್ಮ ಜಾತ್ರೆ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಇಲಾಖೆ ಸಂಬಂಧಿಸಿದ ಕಾರ್ಯಗಳನ್ನು ನಿಭಾಯಿಸಿ.ಜಾತ್ರೆಯಲ್ಲಿ ಅನಧಿಕೃತ ಮಧ್ಯಮಾರಾಟಕ್ಕೆ ಈಗಲೇ ಕಡಿವಾಣ ಹಾಕಬೇಕು ಎಲ್ಲಿಯೂ ಕೂಡ ಮಧ್ಯೆ ಮಾರಾಟಕ್ಕೆ ಅವಕಾಶ ಮಾಡಕೂಡದು .ಭಕ್ತಾಧಿಗಳು ಬರಲು ಸರಕಾರಿ ಬಸ್ ವ್ಯವಸ್ಥೆ ಮಾಡಬೇಕು ಸಾರಿಗೆ ವ್ಯವಸ್ಥೆ ಇಲ್ಲದೆ ದೇವರ ದರ್ಶನ ಮಾಡಿಲ್ಲ ಎಂಬ ಆರೋಪ ಬೇಡ ಜಾತ್ರೆಯಲ್ಲಿ ಯಾವುದೇ  ರಾಜಕೀಯ,  ಪ್ಲೆಕ್ಸ್ ಬ್ಯಾನರ್ ಹಾಕುವಾಗಿಲ್ಲ, ಪೊಲೀಸ್ ಇಲಾಖೆ ಶಿಸ್ತು ಕ್ರಮ ಜರುಗಿಸಿ.ಜಾತ್ರೆಯ ಆವರಣದಲ್ಲಿ ಸುಮಾರು6 ಸಿಸಿ ಕ್ಯಾಮರಾ ಅಳವಡಿಸಲು ತಹಶೀಲ್ದಾರ್ ಸೂಚನೆ ನೀಡಿದರು.ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.