ಗೌರಸಮುದ್ರ ಗ್ರಾಮದ ರಸ್ತೆಗಳಿಗೆ ಕಾಯಕಲ್ಪಕ್ಕೆ ಒತ್ತಾಯ


ನಾಯಕನಹಟ್ಟಿ.ಅ.೧೫; ಹಿರೇಹಳ್ಳಿ ಗ್ರಾಮದಿಂದ ಗೌರಸಮುದ್ರ ಗ್ರಾಮಕ್ಕೆ ರಸ್ತೆ ಡಾಂಬರ್ ಮುಖ ಕಾಣಲೇ ಇಲ್ಲ. ಮಣ್ಣಿನ ಮೇಲೆ ಓಡಾಡುವುದು ಇಲ್ಲಿನ ನಿತ್ಯದ ದೃಶ್ಯವಾಗಿದ್ದು ಮಳೆ ಬಂದರಂತು ದಾರಿಯಲ್ಲಿ ನಡೆದು ಹೋಗಲಿಕ್ಕು ದುಸ್ತಾರವಾಗಿ ಸಂಚಾರವಂತು ಕಷ್ಟಸಾಧ್ಯವಾಗಿದೆ ಎಂದು ಹಿರೇಹಳ್ಳಿ ಗ್ರಾಮಸ್ಥರು, ಗೌರಸಮುದ್ರ ಗ್ರಾಮಸ್ಥರು ಆರೋಪಮಾಡಿದ್ದಾರೆ.ಜನರು ರಸ್ತೆ ಇಲ್ಲದೇ ಪರದಾಡುವಂತೆ ಆಗಿದೆ ಜನಪ್ರತಿನಿಧಿಗಳು ಬರಿ ಚುನಾವಣೆ ಸಮಯದಲ್ಲಿ ಮಾತ್ರ ಈ ಗ್ರಾಮಗಳಿಗೆ ಬೇಟಿ ನೀಡಿ ರಸ್ತೆ ಸರಿಪಡಿಸುವ ಆಶ್ವಾಸನೆ ನೀಡುತ್ತಾರೆ ಎಂಬುವುದು ಇಲ್ಲಿನ ಜನರ ಆರೋಪ. ರಸ್ತೆಯ ತುಂಬೆಲ್ಲ ಗುಂಡಿಗಳು ತುಂಬಿಕೊಂಡು ಜನರು ಓಡಾಟ ನಡೆಸಲಿ ಆಗುತ್ತಿಲ್ಲ. ಮಳೆ ಬಂದ ಸಮಯದಲ್ಲಿ ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿಕೊಂಡು ರಸ್ತೆಯೇ ಕಾಣದಂತೆ ಆಗುತ್ತದೆ. ಗ್ರಾಮದಿಂದ ಪ್ರತಿದಿನ ಬೆಳಿಗ್ಗೆ ಪಕ್ಕದ ಊರಿಗೆ ಹೋಗುವ ಸಮಯದಲ್ಲಿ ಬಿದ್ದು ಬಹಳಷ್ಟು ಬಂದಿ ಗಾಯಮಾಡಿಕೊಂಡಿದ್ದಾರೆ. ಸುಮಾರು 60 ವರ್ಷಗಳಿಂದ ಈ ರಸ್ತೆಗೆ ಡಾಂಬರ್ ಹಾಕಿಲ್ಲ. ಎಷ್ಟೋ ಬಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಗೌರಸಮುದ್ರ ಗ್ರಾಮ ಮೂಲ ಸೌಕಾರ್ಯಗಳಿಂದ ವಂಚಿತವಾಗಿದೆ. ಗೌರಸಮುದ್ರ ದೇವಸ್ಥಾನಕ್ಕೆ ಹಲವಾರು ಭಕ್ತರು ಹೂಗುತ್ತಾರೆ. ರಸ್ತೆಯಲ್ಲಿ ಗುಂಡಿ ಬಿದ್ದಿರುವುದು ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತರಾದ ಓಬಯ್ಯ, ಶಿವಕುಮಾರ್, ಪಾಲಯ್ಯ, ಸಣ್ಣಪಾಪಯ್ಯ, ದಡಪ್ಪ, ಓಬಮ್ಮ, ತಿಪ್ಪೇಸ್ವಾಮಿ, ಟಿ.ರಾಜ್, ಮಂಜುನಾಥ, ಕೇಶವ, ಇನ್ನೂ ಹಲವಾರು ಮುಖಂಡರುಗಳು ಭಾಗವಹಿಸಿದ್ದರು.