ಗೌರವ ಧನ ಬಿಡುಗಡೆಗೆ ಆಗ್ರಹ

ಕೋಲಾರ,ಆ.೨೨:ಜಿಲ್ಲೆಯ ಹಾಲು ಡೇರಿ ಸಂಘದಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಸಿಬ್ಬಂದಿಗಳಿಗೆ ಗೌರವ ಧನ ಹಾಗೂ ಅಕಾಲಿಕವಾಗಿ ಮರಣ ಹೊಂದಿರುವ ಸಂಘದ ಸಿಬ್ಬಂದಿಗಳಿಗೆ ಕೊಡಲೇ ಪರಿಹಾರವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ, ನಮ್ಮ ಕೋಲಾರ ರೈತ ಸಂಘದ ಪದಾಧಿಕಾರಿಗಳು ಕೋಮುಲ್‌ನ ನಿರ್ವಾಹಕ ನಿರ್ದೇಶಕ ಕೆ.ಎನ್.ಗೋಪಾಲ್‌ಮೂರ್ತಿರಿಗೆ ಮನವಿ ಸಲ್ಲಿಸಿದರು.
ನಮ್ಮ ಕೋಲಾರ ರೈತ ಸಂಘದ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್‌ಗೌಡ ಮಾತನಾಡಿ, ಕೋಮುಲ್ ಒಕ್ಕೂಟದಿಂದ ನಿವೃತ್ತ ಹಾಗೂ ಅಕಾಲಿಕ ಮರಣ ಹೊಂದಿದ ಹಾಲು ಉತ್ಪಾದಕರ ಸಹಕಾರ ಸಂಘದ ಸಿಬ್ಬಂದಿಗಳಿಗೆ ಗೌರವ ದಿನ ಬಿಡುಗಡೆ ಮಾಡದಿದ್ದರೆ, ಮುಂಬರುವ ದಿನಗಳಲ್ಲಿ ಕೇಳಿದ ಸ್ವರೂಪದ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಒಕ್ಕೂಟವಾಗಿದ್ದು, ಇದರ ಲಾಭಕ್ಕಾಗಿ ಶ್ರಮಿಸುತ್ತಿರುವ ಉತ್ಪಾದಕ ರೈತ ಕಾಪಾಡುವುದು ಒಕ್ಕೂಟದ ಜವಾಬ್ದಾರಿ. ಕಳೆದ ಎರಡು ಮೂರು ತಿಂಗಳಿನಿಂದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಿವೃತ್ತಿ ಹಾಗೂ ಅಕಾಲಿಕ ಮರಣ ಹೊಂದಿರುವ ಸಿಬ್ಬಂದಿಗಳಿಗೆ ಯಾವುದೇ ರೀತಿಯ ಪರಿಹಾರ ಅಥವಾ ಗೌರವಧನ ಬಿಡುಗಡೆಯಾಗಿರುವುದಿಲ್ಲ ಇದರಿಂದ ಒಕ್ಕೂಟವನ್ನು ಆಧರಿಸಿಕೊಂಡಿರುವ ಕುಟುಂಬಗಳು ಸಾಕಷ್ಟು ತೊಂದರೆ ಆಗಿದೆ ಎಂದು ದೂರಿದರು.
ನಿಯೋಗದಲ್ಲಿ ನಮ್ಮ ಕೋಲಾರ ರೈತ ಸಂಘದ ಮುಖಂಡರಾದ ಕೆಂಬೋಡಿ ಕೃಷ್ಣೇಗೌಡ, ರವಿ, ದೊಡ್ಡಹಳ್ಳಿ ವೆಂಕಟರಮಣಪ್ಪ, ಶ್ರೀಧರ್, ತಮ್ಮೇಗೌಡ ಇದ್ದರು.