ಗೌರವಾರ್ಪಣೆ

ಬಂಟ್ವಾಳ, ಜೂ.೪- ಮುಂಬೈಯಲ್ಲಿ ಬಾರ್ಜ್ ನಲ್ಲಿ ಇಂಧನ ಸಂಸ್ಥೆ ಒಎನ್ ಜಿಸಿಯ ರಿಗ್ ಮರುಜೋಡಣೆ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಚಂಡಮಾರುತದ ಪರಿಣಾಮ ಬಾರ್ಜ್ ಮುಳುಗಡೆಯಾಗಿ ಹತ್ತು ಹನ್ನೆರಡು ಗಂಟೆಗಳ ಕಾಲ ಸಮುದ್ರ ನೀರಿನಲ್ಲಿ ಈಜಿ ಬದುಕಿಬಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ವೀರ ಮಾರುತಿ ನಗರ ನಿವಾಸಿ ಸುಕುಮಾರ್ ಇವರನ್ನು ಭಾರತೀಯ ಜನತಾ ಪಕ್ಷದ ವತಿಯಿಂದ ಗೌರವಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಮದಾಸ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಕ್ಷ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ಪುರುಷೋತ್ತಮ ಸಾಲಿಯಾನ್ ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಕೋಡಿಮಜಲು, ರಂಜಿತ್ ಕೆದ್ದೇಲು ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾದ ಶಶಿಧರ, ಶಶಿಧರ ಃ, ಚಂದ್ರಹಾಸ ಕೊಡಿಮಜಲು, ನಳಿನಿ, ದಯಾನಂದ ಗೌಡ, ಸದಾಶಿವ ಕುಲಾಲ್, ಪ್ರಸಾದ್ ಮಾಣಿಮಜಲು, ಅರುಣ್ ಕುಮಾರ್, ತಾರೇಶ್, ಹರೀಶ್, ಸುನಿಲ್, ದಿಲ್ರಾಜ್, ಕೃಷ್ಣಪ್ಪ ಮೂಲ್ಯ, ಲೀಲಾ, ಕವಿತಾ ಲಕ್ಷ್ಮೀನಾರಾಯಣ, ಚಂದ್ರವತಿ ಮತ್ತಿತರರು ಉಪಸ್ಥಿತರಿದ್ದರು.