ಗೌರವಧನ ಹೆಚ್ಚಳಕ್ಕಾಗಿ ಪ್ರಧಾನಿಗೆ ಪತ್ರ ಚಳುವಳಿ

ಮಾನ್ವಿ.ಜ.೨೧- ದೇಶಾದ್ಯಂತ ಐಸಿಡಿಎಸ್ ಯೋಜನೆಯಲ್ಲಿ ದುಡಿಯುತ್ತಿರುವ ಕಾರ್ಯಕರ್ತೆಯರಿಗೆ ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದು ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಲು ಪತ್ರಚಳುವಳಿ ಮೂಲಕ ಪ್ರಧಾನಿಗಳಿಗೆ ಪತ್ರವನ್ನು ಹಾಕಿದರು.
ಪ್ರಮುಖವಾಗಿ ಗೌರವಧನ, ಕನಿಷ್ಠ ವೇತನ, ನಿವೃತ್ತಿ ಸೌಲಭ್ಯ, ವೈದ್ಯಕೀಯ ಸೌಲಭ್ಯ, ಸೇರಿದಂತೆ ವಿವಿಧ ಬೇಡಿಕೆಗಾಗಿ ತಾಲೂಕಿನ ಎಐಟಿಯುಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಡುಗೆ ಸಹಾಯಕರು ಪತ್ರಚಳುವಳಿ ಮಾಡಿದರು.