ಗೌರವಧನ ಅನಾಥಾಶ್ರಮಕ್ಕೆ ನೀಡಿ ಶ್ರೇಷ್ಠತೆ ಮೆರೆದ ಶಿಕ್ಷಕ

ಕಲಬುರಗಿ,ಸೆ.6-2023-24 ನೇ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಸರ್ಕಾರಿ ಪ್ರೌಢಶಾಲೆ ಹಡಿಗಿಲ್ ಹಾರುತಿಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀದೇವಿ ಕಟ್ಟಿಮನಿ ಅವರ ಪತಿ ರಾಜಶೇಖರ್ ಕಟ್ಟಿಮನಿರವರು ತಮಗೆ ಬಂದಿರುವ ಪ್ರಶಸ್ತಿಯ ಗೌರವ ಧನ 5,000ರೂ.ಗಳನ್ನು ಪ್ರಶಸ್ತಿ ಸ್ವೀಕರಿಸಿ ನೇರವಾಗಿ ನಗರದ ಉದ್ನೂರ್ ರಸ್ತೆಯಲ್ಲಿರುವ ನಂದಗೋಕುಲ ಅನಾಥಾಶ್ರಮದ ಮಕ್ಕಳಿಗೆ ಸಿಹಿ ಹಂಚುವದರೊಂದಿಗೆ ಅನಾಥ ಮಕ್ಕಳಿಗೆ ದೇಣಿಗೆ ನೀಡಿದರು.
ವೃತ್ತಿಯಲ್ಲಿಯೂ ಉತ್ತಮವಾದ ಸೇವೆ ಸಲ್ಲಿಸಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗುವುದಷ್ಟೇ ಅಲ್ಲದೆ ಪ್ರಶಸ್ತಿಗೆ ಬಂದ ಗೌರವಧನವನ್ನು ನಂದಗೋಕುಲ ಅನಾಥಾಶ್ರಮಕ್ಕೆ ನೀಡಿ ಶ್ರೇಷ್ಠತೆಯನ್ನು ಮೆರೆದು ಶಿಕ್ಷಕ ವೃತ್ತಿಯ ಘನತೆಯನ್ನು ಹೆಚ್ಚಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ರಾಜಶೇಖರ್ ಗೋನಾಯಕ್, ರಾಜ್ಯ ಪ್ರಶಸ್ತಿ ಪುರಸ್ಕøತರಾದ ಶಿವಶರಣಪ್ಪ ಮಂಟಾಳೆ, ಉಪನಿರ್ದೇಶಕರ ಕಚೇರಿಯ ಚಂದ್ರಶೇಖರ್ ಪಾಟೀಲ್, ಸಂಪನ್ಮೂಲ ಶಿಕ್ಷಕರಾದ ಸಂಜೀವ್ ಕುಮಾರ್ ಪಾಟೀಲ್, ಅನಿಲ್ ತಾರಫೈಲ್ ಸಂಸ್ಥೆಯ ಆಡಳಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.