ಗೌತಮ ಬುದ್ಧ ಹಾಗು ಮಹಾವೀರ ಪರಸ್ಪರ ಸಂಧಿಸಿದ್ದರೇ?

ವಿಜಯಪುರ:ಮೇ.25: ಗೌತಮ ಬುದ್ಧ ಹಾಗು ಮಹಾವೀರ ಸಮಕಾಲೀನರು. ಹೀಗಾಗಿ ಅವರು ಪರಸ್ಪರ ಭೇಟಿಯಾಗಿದ್ದರೆ. ಇಲ್ಲ. ಅವರು ಒಮ್ಮ ಒಂದೇ ಊರಿನಲ್ಲಿದ್ದರೂ ಪರಸ್ಪರರು ಭೇಟಿಯಾಗಲು ಬಯಸಲಿಲ್ಲ. ಅವರ ಅನುಯಾಯಿಗಳು ಭೇಟಿಗಾಗಿ ಒತ್ತಾಯಿಸಿದರು ಅವರಿಬ್ದಬರೂ ಅದಕ್ಕೆ ಸ್ಪಂದಿಸಲಿಲ್ಲ. ಯಾಕೆಂದರೆ ಅವರಿಬ್ಬರೂ ಜ್ಞಾನಿಗಳು. ಅನುಭಾವಿಗಳು. ಒಬ್ಬ ಜ್ಞಾನಿ ಇನ್ನೊಬ್ಬ ಜ್ಞಾನಿಯನ್ನು ಭೇಟಿಯಾಗುವದರಿಂದ ಯಾವ ಪ್ರಯೋಜನೆಯೂ ಇಲ್ಲ ಎಂಬುದು ಇಬ್ಬರಿಗೂ ತಿಳಿದಿತ್ತು. ಹೀಗಾಗಿ ಅವರು ಪರಸ್ಪರರನ್ನು ಭೇಟಿಯಾಗಲು ಬಯಸಲಿಲ್ಲ. ಒಬ್ಬ ತಿಳಿದವ ಇನ್ನೊಬ್ದ ತಿಳಿಯದವನನ್ನು ಸಂದಿಸಿದರೆ ಜ್ಞಾನವನ್ನು ಹಂಚಬಹುದು. ಇಬ್ಬರು ಜ್ಞಾನಿಗಳು ಅಥವಾ ಇಬ್ಬರು ಅಜ್ಞಾನಿಗಳು ಪರಸ್ಪರ ಭೇಟಿಯಾಗುವದರಿಂದ ಯಾವ ಲಾಭವೂ ಇಲ್ಲ ಎಂಬುದು ಅವರಿಗೆ ತಿಳಿದಿತ್ತು. ಅದು ಕೇವಲ ಕಾಲಹರಣವಾಗುತ್ತಿತ್ತು ಎಂದು ಅವರು ಭಾವಿಸಿದ್ದರು. ಹೀಗೆಂದು ಸಾಹಿತಿ ಸುಭಾಸ ಯಾದವಾಡ ಹೇಳಿದರು. ಅವರು ಜ್ಞಾನಯೋಗಾಶ್ರಮದಲ್ಲಿ ಆಯೋಜಿಸಿದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪನ್ಯಾಸ ನೀಡುತ್ತಿದ್ದರು.
ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಶ್ರೀಗಳು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಇದೇ ಸಂದರ್ಭದಲ್ಲಿ ಪೂಜ್ಯ ಲಿಂಗೈಕ್ಯ ಸಿದ್ಧೇಶ್ವರ ಶ್ರೀಗಳ ಅಂತಿಮ ಕಾಲದಲ್ಲಿ ಅವರ ಬಳಿಯೇ ಇದ್ದು ಶುಶ್ರೂಷೆ ಮಾಡಿದ ತುಮಕೂರಿನ ಡಾಕ್ಟರ್ ಸಂತೋóಷ ದಂಪತಿಗಳನ್ನು ಸನ್ಮಾನಿಸಲಾಯಿತು.
ಅಖಿಲ ಬಾರv ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ವಿ.ಸಿ.ನಾಗಠಾನ ಅತಿಥಿಗಳನ್ನು ಸಭೆಗ ಪರಿಚಯಿಸಿ ಸ್ವಾಗತಿಸಿದರು. ಕೊನೆಗೆ ವೇದಾಂತ ಕೇಸರಿ ಲಿಂಗೈಕ್ಯ ಮಲ್ಲಿಕಾರ್ಜುಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಲಾಯಿತು. ಮಂಗಳಾರತಿಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.