ಗೌತಮ ಬುದ್ಧ ವಿಶ್ವದ ಬೆಳಕು

ಭಾಲ್ಕಿ:ಮೇ.24: ಗೌತಮ ಬುದ್ಧ ವಿಶ್ವದ ಬೆಳಕು. ಅವರ ವಿಚಾರಧಾರೆಗಳು ವಿಶ್ವಕ್ಕೆ ಮಾದರಿಯಾಗಿವೆ ಎಂದು ಪ್ರಾಚಾರ್ಯ ಬಸವರಾಜ ಮೊಳಕೀರೆ ಹೇಳಿದರು. ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಗುರುವಾರ ಆಯೋಜಿಸಿದ್ದ ಗೌತಮ ಬುದ್ಧನ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗೌತಮ ಬುದ್ಧ ಜಗತ್ತಿಗೆ ಶಾಂತಿ, ಕರುಣೆ, ಪ್ರೀತಿಯೆ ಸಂದೇಶ ಸಾರಿದ್ದಾನೆ. ವಿದ್ಯಾರ್ಥಿಗಳು ಗೌತಮ ಬುದ್ಧ ಅವರ ಸಂದೇಶ ಜೀವನದಲ್ಲಿ ಅನುಸರಿಸಿ ಉತ್ತಮ ಬದುಕು ರೂಪಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ, ಪ್ರಮುಖರಾದ ರವಿ ಬಿರಾದಾರ, ಮಧುಕರ ಗಾಂವಕರ್, ಶಿವಪ್ರಕಾಶ ಕುಂಬಾರ ಸೇರಿದಂತೆ ಹಲವರು ಇದ್ದರು.