ಗೌಡ ಎನ್ನುವ ಪದ ಜನಸೇವೆಯಿಂದ ಬಂದಿದ್ದೇ ಹೊರತು ಸರ್ವಾಧಿಕಾರದ ಸಂಕೇತವಲ್ಲ: ಲಿಂಗರಾಜಪ್ಪ ಅಪ್ಪಾ

ಕಲಬುರಗಿ.ಡಿ.28: ಗೌಡ ಎನ್ನುವ ಪದವು ಜನಸೇವೆಯಿಂದ ಬಂದಿದ್ದೇ ಹೊರತು ಸರ್ವಾಧಿಕಾರದ ಸಂಕೇತವಲ್ಲ ಎಂದು ಶ್ರೀ ಶರಣಬಸವೇಶ್ವರ್ ಮಹಾದಾಸೋಹ ಸಂಸ್ಥಾನ ಹಾಗೂ ವಿಶ್ವ ಹಿಂದೂ ಪರಿಷತ್ ಪ್ರಮುಖ ಲಿಂಗರಾಜಪ್ಪ ಅಪ್ಪಾ ಅವರು ಹೇಳಿದರು.
ನಗರದ ಕನ್ನಡ ಭವನದಲ್ಲಿ ಸುಭಾಷಚಂದ್ರ ಪಾಟೀಲ್ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ ಪಾಳಾ ಕೊಡಮಾಡುವ ಗೌಡ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಗೌಡಿಕಿ ಪದ ಬಳಕೆಯಲ್ಲಿತ್ತು. ಶೋಷಣೆಯನ್ನು ಮಾಡುವವರು ಹಾಗೂ ಸರ್ವಾಧಿಕಾರವುಳ್ಳವರು ಎಂಬ ಅರ್ಥದಲ್ಲಿ ಅದನ್ನು ಬಳಕೆ ಮಾಡಲಾಗುತ್ತಿತ್ತು. ಗೌಡಿಕಿ ಬೇರೆ, ಗೌಡ ಪದವೇ ಬೇರೆ ಎಂದು ವಿವರಿಸಿದರು.
ಗೌಡಿಕಿ ಎಂಬ ಪದವು ಮೊದಲು ಜಾತಿಸೂಚಕವಾಗಿತ್ತು. ಈಗ ಅದು ಜಾತಿ ಸೂಚಕವಾಗಿಲ್ಲ. ಜನಸೇವೆಯಲ್ಲಿ ತೊಡಗಿರುವವರಿಗೆ ಗೌಡ ಎಂದು ಕರೆಯಲಾಗುತ್ತಿದೆ. ಗ್ರಾಮದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಹೊಣೆಯನ್ನು ಗೌಡ ವಹಿಸುತ್ತಾರೆ. ಹೀಗಾಗಿ ಜನಸೇವಕ ಎಂಬ ಅರ್ಥದಲ್ಲಿ ಅದನ್ನು ಬಳಸಲಾಗುತ್ತದೆ ಎಂದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಹೊಸಮನಿ ಅವರಿಗೆ ಚಿನ್ನದ ಪದಕ ಹಾಗೂ ಅಕ್ಕಮಹಾದೇವಿ ಆಶ್ರಮದ ಪ್ರಭುದೇವ್ ಆಶ್ರಮದ ಪ್ರಭುಶ್ರೀ ತಾಯಿ ಅವರಿಗೆ ಬೆಳ್ಳಿ ಪದಕದೊಂದಿಗೆ ಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪತ್ರಕರ್ತರಾದ ಬಾಲಾಜಿ ಜೆ. ಚಿತ್ತೇಕರ್, ಶಂಕರ್ ಕೋಡ್ಲಾ, ಜಯತೀರ್ಥ ಪಾಟೀಲ್, ಸಾಹಿತಿಗಳಾದ ಡಾ. ಎಸ್.ಎಸ್. ಗುಬ್ಬಿ, ರತ್ನಾ ಕಾಳೇಗೌಡ, ಡಾ. ನಾಗಪ್ಪ ಗೋಗಿ, ಜೇವರ್ಗಿಯ ಶಮಸುದ್ದೀನ್ ಗುಂಡಗುರ್ತಿ, ವೀರೇಶ್ ಕಂದಗಲ್ ಹಾಗೂ ಬಸವರಾಜ್ ಮಾಹೂರ್, ಪ್ರಶಾಂತ್ ಗೋಲ್ಡ್ ಸ್ಮಿತ್ ಅವರೆಲ್ಲರಿಗೂ ಬೆಳ್ಳಿ ಪದಕದೊಂದಿಗೆ ಗೌಡ ಪ್ರಶಸ್ತಿ ಮೂಲಕ ಪುರಸ್ಕರಿಸಲಾಯಿತು. ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಇದೇ ಸಂದರ್ಭದಲ್ಲಿ ಬಸವಣ್ಣಪ್ಪಗೌಡ ಪಾಟೀಲ್, ಬಸವರಾಜ್ ಪಾಟೀಲ್, ದೇವೆಂದ್ರಪ್ಪ ಪೋಲಿಸ್ ಪಾಟೀಲ್, ಶಶಿಕಲಾ ಪಾಟೀಲ್, ಶಾಂತಾಬಾಯಿ ಪಾಟೀಲ್, ಪುತಳಾಬಾಯಿ ಪಾಟೀಲ್, ಬಿ.ಎನ್. ಪಾಟೀಲ್, ಮಳೆಪ್ಪಗೌಡ ಪಾಟೀಲ್, ಬಸವಣ್ಣೆಪ್ಪಗೌಡ ಮಾಲಿಪಾಟೀಲ್, ನಿರ್ಮಲಾ ಮಗಿ, ರತ್ನಮ್ಮ ಬನ್ನೂರ್, ಕಮಲಾಬಾಯಿ ಬನ್ನೂರ್, ಕರಬಸಪ್ಪ ಮಂಗಲಗಿ, ಯಂಕಪ್ಪ ಹಕ್ಕಿ ಅವರನ್ನೂ ಸಹ ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಅರುಣಕುಮಾರ್ ಎಂ.ವೈ. ಪಾಟೀಲ್ ಅವರು ಗೌಡ ಪ್ರಶಸ್ತಿ ಪುರಸ್ಕøತರ ಮಾಹಿತಿ ಒಳಗೊಂಡ ಪುಸ್ತಕ ಬಿಡುಗಡೆ ಮಾಡಿದರು. ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಸಾಹಿತಿ ಏ.ಕೆ. ರಾಮೇಶ್ವರ್, ಪ್ರಕಾಶಕ ಬಸವರಾಜ್ ಕೊನೆಕ್, ಕುಪೇಂದ್ರ ಪಾಟೀಲ್, ಡಾ. ಕಲ್ಯಾಣರಾವ್ ಪಾಟೀಲ್, ಶಿವಕವಿ ಜೋಗೂರ್, ಡಾ. ಶಿವಶಂಕರ್ ಬಿರಾದಾರ್, ಶಿವರಂಜನ್ ಸತ್ಯಂಪೇಟೆ, ಡಾ. ಶ್ರೀಶೈಲ್ ಬಿರಾದಾರ್, ಡಾ. ಶರಣಬಸಪ್ಪ ವಡ್ಡನಕೇರಿ ಮುಂತಾದವರು ಉಪಸ್ಥಿತರಿದ್ದರು.