ಗೌಡಗೇರಿ ಕೆರೆಗೆ ಶಾಸಕರಿಂದ ಬಾಗಿನ ಅರ್ಪಣೆ

ಕುಂದಗೋಳ,ಸೆ 5: ವರ್ಷಗಳ ಬಳಿಕ ಕೋಡಿ ಬಿದ್ದಿರುವ ತಾಲ್ಲೂಕಿನ ಗೌಡಗೇರಿ ಗ್ರಾಮದ ಕೆರೆಗೆ ಶಾಸಕಿ ಕುಸುಮಾವತಿ ಚ. ಶಿವಳ್ಳಿ ಗ್ರಾಮಸ್ಥರ ಜೊತೆ ಸೇರಿ ಬಾಗಿನ ಅರ್ಪಿಸಿದರು.
ಇದೇ ವೇಳೆ ಮಾತನಾಡಿದ ಅವರು, `ಗ್ರಾಮದ ಕೆರೆ ಭರ್ತಿಯಾಗಿ 6 ವರ್ಷಗಳಾಗಿತ್ತು. ತಿಂಗಳಿಂದ ಸತತ ಮಳೆಯಾದ ಕಾರಣದಿಂದ ಕೆರೆ ಕೋಡಿ ಬಿದ್ದಿದೆ. ಮಳೆಯಾಗಿರುವುದು ಶುಭಸೂಚಕ. ರೈತರು ಕೃಷಿ ಚಟುವಟಿಕೆ ನಡೆಸಲು ಪೂರಕವಾಗಿದೆ ಈ ವರ್ಷ ಅತಿ ಮಳೆ ಆದ ಕಾರಣ ರೈತರು ಬೆಳೆದ ಬೆಳೆಗಳು ಹಾನಿಯಾಗಿವೆ’ ಪರಿಹಾರ ದೊರಕಿಸಿಕೊಡುವ ಕಾರ್ಯವನ್ನು ಸರಕಾರ ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ವೆಂಕನಗೌಡ್ರ ಪೆÇಲೀಸ್ ಪಾಟೀಲ,ವಿಜಯ ಹಾಲಿ,ವಿರುಪನಗೌಡ್ರ ರಂಗನಗೌಡ್ರ, ಭೀಮನಗೌಡ್ರ ಸಣ್ಣಗೌಡ್ರ, ಶೇಖನಗೌಡ ಮಲ್ಲನಗೌಡ್ರ,ಲಚ್ಚಪ್ಪ ಲಮಾಣಿ, ಪುಷ್ಪ ಕಂಬಳಿ,ಗಂಗವ್ವ ಲಮಾಣಿ, ಸಕ್ರಪ್ಪ ಲಮಾಣಿ, ರಮೇಶ ಚ ಲಮಾಣಿ, ಹನಮಂತಪ್ಪ ನಡುವಿನಮನಿ, ಮಾಲಿಂಗಪ್ಪ ಮಣ್ಣೂರ, ಶೇಖಪ್ಪ ಲಮಾಣಿ, ಧರ್ಮಣ್ಣ ಲಮಾಣಿ, ರಾಮಣ್ಣ ಮಣ್ಣೂರ, ರಮೇಶ ಗುಂಜಳ, ಶೇಖಪ್ಪ ಗುಂಜಳ, ನಾಗಪ್ಪ ಕಂಬಳಿ, ರವಿ ಮಣ್ಣೂರ, ರಮೇಶ ಲ. ಲಮಾಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.