ಗೋ ಮಾತೆಗೆ ಪೂಜನೀಯ ಸ್ಥಾನವಿದೆ


ಹೊನ್ನಾಳಿ.ನ.೧೦; ಗೋ ಮಾತೆ ಸಮಸ್ತ ಜಗದ ಲೋಕಮಾತೆ. ಭಗವಂತ ಸಮಸ್ತ ಸೃಷ್ಟಿಗೆ ಮಾತೆಯ ರೂಪದಲ್ಲಿ ಗೋವನ್ನು ಭೂಮಿಗೆ ಕಳುಹಿಸಿದ್ದಾನೆ. ಭಾರತೀಯರ ಹೃದಯದಲ್ಲಿ ಗೋ ಮಾತೆಗೆ ಪೂಜನೀಯ ಸ್ಥಾನವಿದೆ ಎಂದು ಪ್ರಾಂತ ಗೋ ಸೇವಾ ಪ್ರಮುಖ್ ಪ್ರವೀಣ್ ಸರಳಾಯಿ ಹೇಳಿದರು.ತಾಲೂಕಿನ ಬಳ್ಳೇಶ್ವರ ಗ್ರಾಮದಲ್ಲಿ ಗೋ ಸೇವಾ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಗೋ ಮಾತೆಯನ್ನು ವ್ಯವಹಾರಕ್ಕೆ ಬಳಸಿಕೊಂಡಿಲ್ಲ. ಗೋವನ್ನು ಕುಟುಂಬ ಒಬ್ಬ ಸದಸ್ಯನಂತೆ ಪರಿಗಣಿಸಿದ ರಾಷ್ಟ್ರ ನಮ್ಮದು. ಹಾಗಾಗಿ, ಅಂದಿನಿಂದ ಇಂದಿನವರೆಗೂ ಗೋವಿನ ಮಹತ್ವ ಕಡಿಮೆಯಾಗಿಲ್ಲ ಎಂದು ತಿಳಿಸಿದರು.ಕ್ಷೇತ್ರಿಯ ಗೋ ಸೇವಾ ಪ್ರಮುಖ್ ಮಧುಸೂಧನ್, ವಿಭಾಗ ಗೋ ಸೇವಾ ಪ್ರಮುಖ್ ಕುಮಾರಸ್ವಾಮಿ, ಸಂಘದ ವಿಭಾಗ ಪ್ರಚಾರಕ್ ಬಾಲಕೃಷ್ಣ, ಸ್ಥಳೀಯ ಪರಿವಾರದ ಮುಖಂಡರಾದ ಬಳ್ಳೇಶ್ವರ ಹಾಲೇಶ್, ಕೊನಾಯಕನಹಳ್ಳಿ ಮಂಜುನಾಥ್, ಕಂಚುಗಾರನಹಳ್ಳಿ ಹಾಲೇಶ್ ಮತ್ತಿತರರು ಉಪಸ್ಥಿತರಿದ್ದರು.