ಗೋ ಬ್ಯಾಕ್ ಸುನಿಲ್ ಬೋಸ್ ಪೋಸ್ಟರ್ ಪ್ರತ್ಯಕ್ಷ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.04- ನಾಮಿನೇಷನ್ ದಿನವೇ ಗೋ ಬ್ಯಾಕ್ ಸುನಿಲ್ ಬೋಸ್ ಪೆÇೀಸ್ಟರ್ ಪ್ರತ್ಯಕ್ಷ ಆಗಿರುವ ಘಟನೆ ಚಾಮರಾಜನಗರದ ಸಂತೇಮರಹಳ್ಳಿ ರಸ್ತೆಯಲ್ಲಿ ಬುಧವಾರ ನಡೆದಿದೆ.
ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ವಿರುದ್ಧ ಅಸಮಾಧಾನ ಹೊರಹಾಕಿರುವ ಅನಾಮಿಕರು, ಗೋ ಬ್ಯಾಕ್ ಪೆÇೀಸ್ಟರ್ ಅಂಟಿಸಿ, ಮರಳು ಮಾಫಿಯಾ ದೊರೆಗೆ ಮರಳಾಗಬೇಡಿ ಎಂದು ಬರೆದಿದ್ದಾರೆ.
ಪೇಂಟಿನಲ್ಲಿ ಕೂಡ ಗೋ ಬ್ಯಾಕ್ ಸುನಿಲ್ ಬೋಸ್ ಎಂದು ಬರೆದು ಅಪರಿಚಿತರು ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ಅವರಿಂದ ಅಪಪ್ರಚಾರ, ಮರಳು ದಂಧೆ ಸಾಬೀತು ಪಡಿಸಿದರೇ ನಾಮಪತ್ರವೇ ಸಲ್ಲಿಸಲ್ಲ: ಈ ಬಗ್ಗೆ ಪ್ರತಿಕ್ರಿಯಿಸಿದ ಸುನಿಲ್ ಬೋಸ್‍ಗೋ ಬ್ಯಾಕ್ ಸುನಿಲ್ ಬೋಸ್ ಎಂದು ಪೆÇೀಸ್ಟರ್ ಅಂಟಿಸಿರುವುದು ಬಿಜೆಪಿಯವರು, ಅವರೇ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಗೋ ಬ್ಯಾಕ್ ಅಂಥಾ ಯಾಕೆ ಹಾಕಿದ್ದಾರೆ, ನಾನು ಹೊರಗಿವನಾ?
ಮರಳು ಮಾಫಿಯಾ ಕೇಸ್ ಕೋರ್ಟ್‍ನಲ್ಲಿ ವಜಾ ಆಗಿದೆ.ಕ್ಲೀನ್ ಚಿಟ್ ಕೊಡಲಾಗಿದೆ, ಬಿಜೆಪಿಯವರಿಗೆ ಸವಾಲು ಹಾಕುತ್ತೇನೆ, ನನ್ನ ವಿರುದ್ಧ ಮರಳು ದಂಧೆ ಆರೋಪ ಸಾಬೀತು ಮಾಡಿದರೇ ನಾನು ನಾಮಪತ್ರವನ್ನೇ ಸಲ್ಲಿಸುವುದಿಲ್ಲ ಎಂದರು.
ಗೋ ಬ್ಯಾಕ್ ಬರೆದವರ ವಿರುದ್ಧ ದೂರು ಕೊಡ್ತೀನಿ: ಚುನಾವಣಾಧಿಕಾರಿಗಳಿಗೆ ದೂರು ಕೊಡಲಾಗುವುದು. ಮಾಧ್ಯಮವರು ಹೇಳಿದ ಮೇಲೆ ಗೋ ಬ್ಯಾಕ್ ವಿಚಾರ ಗಮನಕ್ಕೆ ಬಂದಿದೆ, ಬಿಜೆಪಿಯವರು ಈ ಅಪಪ್ರಚಾರ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕರ್ನಾಟಕದಲ್ಲಿ ಮೋದಿ ಹವಾ ಇಲ್ಲಾ, ಕಾಂಗ್ರೆಸ್ ಈ ಬಾರಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.