ಗೋ ಬ್ಯಾಕ್ ಅಮರೇಶ್ವರ್ ನಾಯಕ್

(ಸಂಜೆವಾಣಿ ವಾರ್ತೆ)
ರಾಯಚೂರು, ಮಾ. ೨೭- ಬಿಜೆಪಿ ನಾಯಕ ಬಿವಿನಾಯಕ್ ಅವರಿಗೆ ಟಿಕೆಟ್ ತಪ್ಪಿದ್ದು ಬಿಜೆಪಿ ಹೈಕಮಾಂಡ್ ಹಾಲಿ ಸಂಸದ ರಾಜ ಅಮರೇಶ್ವರ ನಾಯಕ ಅವರಿಗೆ ಮಣೆ ಹಾಕಿರುವುದನ್ನು ಬಿವಿ ನಾಯಕ್ ಅವರ ಬೆಂಬಲಗರಿಂದ ಆಕ್ರೋಶ ಭುಗಿಲೆದ್ದ ಘಟನೆ ನಡೆಯಿತು.
ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿವಿ ನಾಯಕ್ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಆದರೆ ಬಿವಿ ನಾಯಕ್ ಅವರಿಗೆ ಟಿಕೆಟ್ ನೀಡದೆ ಹಾಲಿ ಸಂಸದ ಅಮರೇಶ್ವರ್ ನಾಯಕ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಬಿವಿ ನಾಯಕ್ ತಮ್ಮ ಬೆಂಬಲಗರೊಂದಿಗೆ ಏರ್ಪಡಿಸಿದ್ದ ಚಿಂತನಾ ಸಭೆಯಲ್ಲಿ ಅಮರೇಶ್ವರ್ ನಾಯಕ ವಿರುದ್ಧ ಗೋ ಬ್ಯಾಕ್ ಘೋಷಣೆ ಪ್ರತಿಧ್ವನಿಸಿತು.
ಕಾರ್ಯಕ್ರಮ ಆರಂಭಕ್ಕೂ ಮೊದಲು ಬಿಜೆಪಿ ಯುವ ನಾಯಕರು ಅಮರೇಶ್ವರ್ ನಾಯಕ ವಿರುದ್ಧ ಗೋ ಬ್ಯಾಕ್ ಫಲಕಗಳನ್ನು ಪ್ರದರ್ಶಿಸಿ ಗೋ ಬ್ಯಾಕ್ ಘೋಷಣೆಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.