ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಲು ಮನವಿ

ಕೋಲಾರ,ಜ.೧೩:ಕೋಲಾರ ನಗರದ ಮೌಲಾನಾ ಆಜಾದ್ ಭವನದಲ್ಲಿ ಅಲ್ಪಸಂಖ್ಯಾತರ ಕುಂದು ಕೊರತೆ ಸಭೆಯು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜಿಮ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಮೊಹಮ್ಮದ್ ಜಬಿವುಲ್ಲಾ ರವರು ಭಾಗವಹಿಸಿ ಮಾತನಾಡಿ, ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತರಿಗೆ ನ್ಯಾಯ ಕೊಡಿಸುವ ಜವಾಬ್ದಾರಿ ನಿಮ್ಮ ಮೇಲೆ ಇದೆ. ತಾವು ದಯಮಾಡಿ ವಕ್ವ್ಬ್ ಆಸ್ತಿಗಳನ್ನು ಗುರುತಿಸಿ ಅವನು ರಕ್ಷಿಸಬೇಕಾಗಿ ಹಾಗೂ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಶ್ರಮಶಕ್ತಿ ಯೋಜನೆ ಅಡಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ ಫಲಾನುಭವಿಗಳಿಗೆ ಸಾಲ ಸೌಲಭ್ಯವನ್ನು ಕಡಿತ ಮಾಡಿದ್ದು ಅವರಿಗೆ ಉಳಿಕೆ ಹಣವನ್ನು ಪಾವತಿಸಬೇಕೆಂದು , ಎಲ್ಲಾ ಸಮುದಾಯದ ಸ್ಮಶಾನಗಳನ್ನು ಮಂಜೂರು ಮಾಡಬೇಕೆಂದು, ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಅಭಿವೃದ್ದಿಗಾಗಿ ಅನುದಾನ ಬಿಡುಗಡೆ ಮಾಡಬೇಕೆಂದು, ಅಲ್ಪಸಂಖ್ಯಾತರ ಇಲಾಖೆಗೆ ಹೆಚ್ಚಿನ ಅನುದಾನ ಕೊಡಿಸಬೇಕೆಂದು, ಹಳೆಯ ಉರ್ದು ಶಾಲೆಗಳನ್ನು ದುರಸ್ತಿ ಮಾಡಲು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರಿವಾಘ್ಞೆ ಮುಖಾಂತರ ಜಾರಿಗೆ ತಂದಿದ್ದು ಅದರಲ್ಲಿ ಲೋಪದೋಷಗಳು ಅಂದರೆ ಯಾವುದೇ ಒಬ್ಬ ವ್ಯಕ್ತಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ದನಕರುಗಳನ್ನು ಸಾಗಿಸುತ್ತಿದ್ದರೆ ರಸ್ತೆಯಲ್ಲಿ ಯಾವುದೇ ಒಬ್ಬ ವ್ಯಕ್ತಿ ನಿಲ್ಲಿಸಿ ಸಾಗಿಸುವ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡಿ ಹಿಂಸಿಸಿದರೆ ಅದು ಅಪರಾಧವಲ್ಲ ಹಾಗೂ ಅವರನ್ನು ಸಾರ್ವಜನಿಕ ಸೇವಕನೆಂದು ಬಾವಿಸತಕ್ಕದು ಎಂದು ರಾಜ್ಯ ಸರ್ಕಾರ ಕಾನೂನು ಜಾರಿಗೆ ತಂದಿದ್ದು, ಕಾನೂನುಗಳಿಂದ ಶಾಂತಿ-ಸುವ್ಯವಸ್ಥೆ ಧಕ್ಕೆ ಆಗುತ್ತದೆ ಇಂತಹ ಕಾನೂನುಗಳನ್ನು ಹಿಂಪಡೆದು ರಾಜ್ಯ ಸರ್ಕಾರ ಕೂಡಲೇ ರೈತರ ಮತ್ತು ಅಲ್ಪಸಂಖ್ಯಾತರ ದಲಿತರ ಪರ ನಿಲ್ಲಬೇಕೆಂದು ಹಾಗೂ ಬೀಡಿ ಕಾರ್ಮಿಕರಿಗೆ ಖಾಲಿ ನಿವೇಶನಗಳನ್ನು ಮಂಜೂರು ಮಾಡಿ ಸರ್ಕಾರದ ವತಿಯಿಮದ ಅವರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷರಾದ ಅಬ್ದುಲ್ ಅಜಿಮ್, ಅಲ್ಪಸಂಖ್ಯಾತರ ಇಲಾಖೆಯ ನಿರ್ದೇಶಕರಾದ ಮಹಬೂಬ್, ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿಗಳಾದ ಮುರಳಿ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಜಮೀನ್, ನಗರಸಭಾ ಸದಸ್ಯರಾದ ಮೊಹಮ್ಮದ್ ಜಬಿವುಲ್ಲಾ, ಕನ್ನಡ ಟಿಪ್ಪು ಸಂಘದ ಅಧ್ಯಕ್ಷರಾದ ಬಾಬು, ಬೀಡಿ ಕಾರ್ಮಿಕರ ಅಧ್ಯಕ್ಷ ಅಸ್ಲಮ್ ಪಾಶ, ಮುಖಂಡರಾದ ಬೆಗ್ಲಿ ಸಿರಾಜ್, ಹಸಂ, ಅಲ್ಪಸಂಖ್ಯಾತರ ಮುಖಂಡರು ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಉರ್ದು ಶಿಕ್ಷಕರು ಸಂಘ-ಸಂಸ್ಥೆಗಳ ಮುಖಂಡರುಗಳು ಹಾಜರಿದ್ದರು.