ಚನ್ನಮ್ಮನ ಕಿತ್ತೂರ,ಜೂ6: ದನ ಕರುಗಳ ಮೇಲೆ ರಾಜಕೀಯ ಮಾಡಬಾರದು ಅವು ಮೂಕ ಪ್ರಾಣಿ ನಾವು ಏನೂ ಮಾಡಿದರು ಮಾಡಿಸಿಕೊಳ್ಳುತ್ತವೆ. ಅದಕ್ಕಾಗಿ ಅವುಗಳ ಹತ್ಯೆ ಏಕೆ ಮಾಡಬೇಕು. ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಯಾಗಬೇಕು ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿವಾದ ಮರೆತು ದನ-ಕರುಗಳನ್ನು ಸಾಕುವವರು ರೈತರು ಮತ್ತು ಹಾಲಿನ ಡೈರಿ ಮಾಲಕರು ಅವರ ವಿಚಾರಗಳನ್ನು ಅರಿತು ರಾಜಕೀಯ ಮಾಡಬೇಕೆಂದರು.
ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರವಾಗಿ ಮಾತನಾಡುವ ಬಿಜೆಪಿಯ ಯಾವ ನಾಯಕರು ತಮ್ಮ ಮನೆಯಲ್ಲಿ ಗೋವು ಸಾಕಿಲ್ಲ ಈ ಕುರಿತು ಸುಮ್ಮನೆ ಮಾತನಾಡುತ್ತಾರಷ್ಟೇ. ಪ್ಲಾಸ್ಟಿಕ ಗೋ ಕಟ್ಟಿ ಪೂಜಿಸುವವರು ತಮ್ಮ ಮನೆಯಲೊಂದು ಗೋ ಕಟ್ಟಿ ಮಾತನಾಡಲಿ ಎಂದವರು ಹೇಳಿದರು.
ಕಾಂಗ್ರೇಸಿನಲ್ಲಿ ಎಂದು ಜಗಳವಿಲ್ಲ. ಹೊಂದಾಣಿಕೆಯ ಮೇರೆಗೆ ನನಗೂ ಸಹ ಸಚಿವ ಸ್ಥಾನದ ಅವಕಾಶ ನಮ್ಮ ನಾಯಕರು ಕಲ್ಪಿಸುತ್ತಾರೆಂಬ ವಿಶ್ವಾಸ ನನಗಿದೆ. ಮತ್ತೇ ಸಂಪುಟ ವಿಸ್ತರಣೆಯಾಗುತ್ತದೆ. ನಮ್ಮ ಸಮುದಾಯದವರನ್ನು ಹೊರತುಪಡಿಸಿ ಬೇರೆ ಸಮುದಾಯದವರಿಗೂ ಅವಕಾಶ ಸಿಗಬೇಕಾಗಿದೆ. ಈ ಹಿಂದೆ ಸಚಿವರಾದವರಿಗೆ ಅವಕಾಶ ಕೊಡುವಂತಹದ್ದೇನಿದೆ ಎಂದು ಅವರು ನುಡಿದರು.