ಗೋಹತ್ಯೆ ನಿಷೇಧ ಕಾಯ್ದೆ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಮನವಿ

ದಾವಣಗೆರೆ.ಏ.೯; ಗೋ ಹತ್ಯೆ ನಿಷೇಧ ಕಾಯ್ದೆ 2021 ನ್ನು ದಾವಣಗೆರೆ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಬೇಕೆಂದು ಬಿಜೆಪಿ ಕಾರ್ಯಕರ್ತ ದಸ್ತಗೀರ್ ಎಸ್ ಅಸಾದುಲ್ಲಾ ಒತ್ತಾಯ ಮಾಡಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಸರ್ಕಾರವು ಗೋ ಹತ್ಯೆ ನಿಷೇಧ ಕಾಯ್ದೆ 2021 ನ್ನು ಹೊರಡಿಸಿರುತ್ತದೆ . ಇದನ್ನು ದಾವಣಗೆರೆ ಜಿಲ್ಲೆಯಲ್ಲಿ ಅನುಷ್ಠಾನ ಗೊಳಿಸದೇ ಇರುವುದು ವಿಷಾಧನೀಯ  ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದಂತೆ ಸದರಿ ಕಾಯ್ದೆಯ ಷರತ್ತುಗಳು ಉಲ್ಲಂಘನೆ ಮಾಡಿ ಹಲವಾರು ಅನಧಿಕೃತ ಬೀಫ್ ಶಾಪ್‌ಗಳು , ಖಸಾಯಿಖಾನೆಗಳು ನಿರ್ವಹಿಸುತ್ತಿದ್ದು , ಸರ್ಕಾರಿ ಅಧಿಕಾರಿಗಳು ಅಂಗಡಿಗೆ ಭೇಟಿ ಮಾಡಿದಾಗ ಕಾಯ್ದೆ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ . ಈ ಕಾಯ್ದೆಯ ಷರತ್ತಿನ ಅನುಸಾರವಾಗಿ ದಾವಣಗೆರೆ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಪಶು ವೈದ್ಯಾಧಿಕಾರಿಗಳು ಪ್ರತಿ ಬೀಫ್ ಅಂಗಡಿಗೆ , ಖಸಾಯಿ ಖಾನೆಗಳಿಗೆ ಭೇಟಿ ನೀಡಿ ಪಶು ಪರೀಕ್ಷೆ ಮಾಡಿ ಪಶುವಿನ ಪರೀಕ್ಷಾ ವರದಿ ಪಡೆದ ನಂತರ ಯೋಗ್ಯವಾಗಿದ್ದರೆ ಉಪಯೋಗಿಸಲು ಅನುಮತಿ ನೀಡಬೇಕು.ಕಾಯ್ದೆಗೆ ಸಂಬಂಧಪಟ್ಟಂತೆ ಕಾನೂನು ಷರತ್ತುಗಳನ್ನು ಅನುಷ್ಠಾನ ಗೊಳಿಸುವಲ್ಲಿ ಜಿಲ್ಲಾಡಳಿತ ಪೂರ್ಣ ಪ್ರಮಾಣದಲ್ಲಿ ವಿಫಲ ಗೊಂಡಿದೆ .  ಗೋ ಹತ್ಯೆ ನಿಷೇಧ ಕಾಯ್ದೆ 2021 ನ್ನು ದಾವಣಗೆರೆ ಜಿಲ್ಲೆಯಲ್ಲಿ ಯಾರೂ ಸಹ ಪಾಲನೆ ಮಾಡಿಲ್ಲ.ಆದ್ದರಿಂದ ಈ ಕಾಯ್ದೆಯನ್ನು ಪಾಲಿಸುವಂತೆ ಕ್ರಮ ಕೊಳ್ಳಬೇಕು. ಇದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು.  ಅನಧಿಕೃತ ಭೀಪ್ ಅಂಗಡಿಗಳನ್ನು ಗುರುತಿಸಿ ಅವರುಗಳಿಗೆ ಭೀಫ್ ಅಂಗಡಿಯ ಪರವಾನಿಗೆಯನ್ನು ನೀಡಿ ಗೋ ಹತ್ಯೆ ನಿಷೇಧ ಕಾಯ್ದೆ 2021 ರ ಎಲ್ಲಾ ಷರತ್ತುಗಳನ್ನು ಪಾಲಿಸುವಂತೆ ಸೂಚಿಸಬೇಕು.  ಸರ್ಕಾರವು ನುಡಿದಂತೆ ನಡೆ ಎಂಬ ಪ್ರಣಾಳಿಕೆಯಂತೆ  ಕಾಯ್ದೆಯನ್ನು ಅನುಷ್ಠಾನಕ್ಕೆ ತಂದಿದ್ದು , ಅದನ್ನು ಪಾಲಿಸುವುದು ಕರ್ನಾಟಕ ರಾಜ್ಯದ ಎಲ್ಲಾ ಪ್ರಜೆಗಳ ಆದ್ಯ ಕರ್ತವ್ಯವಾಗಿರುತ್ತದೆ . ಈ ಕಾಯ್ದೆಯನ್ನು ಅನುಷ್ಠಾನ ಗೊಳಿಸಿ ಭಾರತ ದೇಶದಲ್ಲಿ ಗೋವು ಗಳನ್ನು ಸಂರಕ್ಷಿಸುವುದು ಈ ಕಾಯ್ದೆಯ ಮೂಲ ಉದ್ದೇಶವಾಗಿದೆ. ಜಿಲ್ಲಾದ್ಯಂತ ಗೋ ಸಂರಕ್ಷಣೆಗಾಗಿ ಸೂಕ್ತ ಗೋಶಾಲೆಗಳನ್ನು ತೆರೆದು ಗೋ ಸಂರಕ್ಷಣೆಯನ್ನು ಮಾಡುವುದು ಅತ್ಯವಶ್ಯಕವಾಗಿದೆ ಎಂದರು.