ಗೋಸ್ವಾಮಿ ಅಧಿಕಾರ ಸ್ವೀಕಾರ

ಕಾರವಾರ,ಮಾ24: ಉತ್ತರಕನ್ನಡ ಜಿಲ್ಲೆಯ ಕಾರವಾರದ ಅರ್ಗಾದಲ್ಲಿರುವ ಐಎನ್‍ಎಸ್ ಕದಂಬ ನೌಕಾನೆಲೆಯ ಶಿಪ್ ರಿಪೇರ್ ಯಾರ್ಡ್ನ ನೂತನ ಅಡ್ಮಿರಲ್ ಸುಪರಿಂಟೆಂಡೆಂಟ್ ಆಗಿ ರಿಯರ್ ಅಡ್ಮಿರಲ್ ಡಿ.ಕೆ.ಗೋಸ್ವಾಮಿ ಅಧಿಕಾರ ವಹಿಸಿಕೊಂಡಿದ್ದಾರೆ.
ರಿಯರ್ ಅಡ್ಮಿರಲ್ ಡಿ.ಕೆ.ಗೋಸ್ವಾಮಿ ಐಐಟಿ ಮದ್ರಾಸ್‍ನಿಂದ ಸ್ನಾತಕೋತ್ತರ ಪದವೀಧರರಾಗಿದ್ದು, ನೇವಲ್ ಕಾಲೇಜ್ ಆಫ್ ಎಂಜಿನಿಯರಿಂಗ್, ಕಾಲೇಜ್ ಆಫ್ ಡಿಫೆನ್ಸ್ ಮ್ಯಾನೇಜ್ಮೆಂಟ್ (ಸಿಡಿಎಂ) ಮತ್ತು ರಾಷ್ಟ್ರೀಯ ರಕ್ಷಣಾ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದಾರೆ.
ಅವರು ತಮ್ಮ ಮೂವತ್ತು ವರ್ಷಗಳಿಗಿಂತ ಹೆಚ್ಚು ಅವಧಿಯ ವೃತ್ತಿಜೀವನದಲ್ಲಿ, ಸಿಕಂದರಾಬಾದ್‍ನ ಸಿಡಿಎಂನಲ್ಲಿ ಡೈರೆಕ್ಟಿಂಗ್ ಸ್ಟಾಫ್ ಸೇರಿದಂತೆ ವಿವಿಧ ಕಾರ್ಯಕಾರಿ, ಸಿಬ್ಬಂದಿ ಮತ್ತು ಡಾಕ್ ಯಾರ್ಡ್ ನೇಮಕಾತಿಗಳನ್ನು ನಿರ್ವಹಿಸಿದ್ದಾರೆ. ಅವರು ಮುಂಬೈನ ನೇವಲ್ ಡಾಕ್ ಯಾರ್ಡ್, ವೆಸ್ಟರ್ನ್ ನೇವಲ್ ಕಮಾಂಡನಲ್ಲಿ ಕಮಾಂಡ್ ರಿಫಿಟ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಪ್ರಸ್ತುತ ನಿಯೋಜನೆಯನ್ನು ವಹಿಸಿಕೊಳ್ಳುವ ಮೊದಲು ಪೆÇೀರ್ಟ್ ಬ್ಲೇರ್‍ನ ನೇವಲ್ ಶಿಪ್ ರಿಪೇರಿ ಯಾರ್ಡ್ ಮುಖ್ಯಸ್ಥರಾಗಿದ್ದರು.