ಗೋಶಾಲೆ ಸ್ವಚ್ಛಗೊಳಿಸಿದ ಎನ ಎಸ್ ಎಸ್ ಶಿಬಿರಾರ್ಥಿಗಳು

ಕಲಬುರಗಿ, ಮೇ.27: ಔರಾದ (ಬಿ) ಗ್ರಾಮದ ಶ್ರೀ ಸ್ವಾಮಿಸಮರ್ಥ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ನೂತನ ವಿದ್ಯಾಲಯ ಸಂಸ್ಥೆಯ ನೂ.ವಿ.ಪದವಿ ಮಹಾವಿದ್ಯಾಲಯದ 50 ವಿದ್ಯಾರ್ಥಿಗಳು ಒಳಗೊಂಡ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರಾರ್ಥಿಗಳು ಬೆಳ್ಳಗೆ ಗೋಶಾಲೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿದರು.

ಮಧ್ಯಾನ್ಹ ಬಸವಕಲ್ಯಾಣ ಡಾ ಬಿ ಆರ್ ಅಂಬೇಡ್ಕರ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಶರಣು ಎಸ್ ದೇಸಾಯಿಯವರು ಹಾಸ್ಯ ಕಾರ್ಯವನ್ನು ನಡೆಸಿಕೊಟ್ಟರು. ಪತ್ರಿಕಾ ಛಾಯಾಗ್ರಾಹಕ ನಾರಾಯಣ ಎಂ ಜೋಶಿ ಅಧ್ಯಕ್ಷತೆವಹಿಸಿದ್ದರು. ಎನ್ ಎಸ್ ಎಸ್ ಆಡಳಿತ ಅಧಿಕಾರಿ
ಡಾ. ದಯಾನಂದ ಶಾಸ್ತ್ರೀಯವರು ವಂದಿಸಿದರು.