ಗೋಶಾಲೆಯಲ್ಲಿ ಜನ್ಮ ದಿನಾಚರಣೆ

ಬಾದಾಮಿ, ಮೇ3: ಸಮೀಪದ ಬನಶಂಕರಿಯಲ್ಲಿರುವ ಮನೋರಥ ಪ್ರತಿμÁ್ಠನ ಗೋಶಾಲೆಗೆ ನಿವೃತ್ತ ಮುಖ್ಯ ಶಿಕ್ಷಕ ಬಿ.ಎಸ್.ಪವಾಡಶೆಟ್ಟಿ ಅವರ ಮೊಮ್ಮಗನಾದ ಅದ್ವೈತ ಪವಾಡಶೆಟ್ಟಿ ಅವರ 2ನೇ ವರ್ಷದ ಜನ್ಮದಿನವನ್ನು ಗೋಶಾಲೆಯಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸುವದರ ಮೂಲಕ ಆಚರಣೆಯನ್ನು ಮಾಡಲಾಯಿತು.
ಗೋವುಗಳಿಗೆ ಆಹಾರವಾಗಿ ಒಂದು ಗಾಡಿ ಮೇವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕುಟುಂಬದ ಎ.ಎಸ್. ಪವಾಡಶೆಟ್ಟಿ, ಶಿಕ್ಷಕ ಕುಮಾರ ಎಸ್.ಪವಾಡಶೆಟ್ಟಿ, ಸಂಗು ಪಡಿಯಪ್ಪನವರ ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿದ್ದರು.