ಗೋಶಾಲೆಗೆ ಮೇವು ದಾನ

ಕಲಬುರಗಿ:ಎ.20:ನಗರದ ರೇಷ್ಮಿ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ಶರತ ರೇಷ್ಮಿಯವರು ಕುಸನೂರಿನ ಶ್ರೀ ಮಾಧವ ಗೋಶಾಲೆಗೆ ಎರಡು ಟ್ಯಾಕ್ಟರ್ ಕಣಕಿಯನ್ನು ನೀಡಿದ್ದಾರೆ.
ಗೋಶಾಲೆಯ ಅಧ್ಯಕ್ಷರು ಹಾಗು ಪದಾಧಿಕಾರಿಗಳು ಅವರ ಈ ಗೋಸೇವೆಗೆ ಅನಂತ ಕೃತಘ್ನತೆಗಳು ಸಲ್ಲಿಸಿದ್ದಾರೆ. ಶ್ರೀ ಮಾಧವ ಗೋಶಾಲೆ ನಿರಾಶ್ರಿತ, ರೋಗಗ್ರಸ್ತ, ವಯಸ್ಸಾದ ಗೋವುಗಳ ಸೇವೆಯಲ್ಲಿ ನಿಸ್ವಾರ್ಥವಾಗಿ ತೊಡಗಿಕೊಂಡಿದ್ದು ನಾವೆಲ್ಲರೂ ಈ ಕಾರ್ಯಕ್ಕೆ ನೆರವು ನೀಡಬೇಕು, ಗೋವುಗಳು ಕೃಷಿ ಹಾಗು ರೋಗ ಮುಕ್ತ ಜೀವನಕ್ಕೆ ಆಧಾರ ಎಂದು ಶ್ರೀ ಶರತ ರೇಷ್ಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.