ಗೋವು ದತ್ತು ಪಡೆದ ಸೂರ್ಯಕಾಂತ್ ನಾಗಮಾರಪಳ್ಳಿ

ಬೀದರ್: ಅ.1:ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಗೋವು ದತ್ತು ಪಡೆದಿದ್ದಾರೆ.

ಭಾಲ್ಕಿಯ ತುರುಗೈ ರಾಮಣ್ಣ ಗೋಶಾಲೆಯ ಗೋವು `ಬಸವ’ನನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆದಿದ್ದಾರೆ. ಈ ಸಂಬಂಧ 11,000 ರೂ. ಪಾವತಿಸಿದ್ದಾರೆ.

ಪುಣ್ಯಕೋಟಿ ದತ್ತು ಯೋಜನೆಯಡಿ ಸಾರ್ವಜನಿಕರೂ ಗೋವು ದತ್ತು ಪಡದು, ಗೋ ಸಂರಕ್ಷಣಾ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ ಮಾಡಿದ್ದಾರೆ.

ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಹಿಂದೆ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮ ಗೋಶಾಲೆಯ ಗೋವನ್ನೂ ದತ್ತು ಪಡೆದಿದ್ದರು. ಶ್ರೀ ಉತ್ತರಾದಿ ಮಠ, ಗೋಶಾಲೆ, ಸುಕ್ಷೇತ್ರ ಮಳಖೇಡ, ಜಿಲ್ಲೆ ಕಲಬುರಗಿ, ನಾಡಿನ ಬೇರೆ ಬೇರೆ ಮಠಗಳ ಗೋವುಗಳನ್ನು ಸಹ ದತ್ತು ಪಡೆದಿದ್ದರು.

ಸೂರ್ಯಕಾಂತ್ ಅವರ ಪುತ್ರ ತರುಣ್ ಸೂರ್ಯಕಾಂತ್ ಅವರು `ಲಕ್ಷ್ಮೀ’ ಎಂಬ ಗೋವನ್ನು ದತ್ತು ಪಡೆದಿದ್ದಾರೆ.