ಗೋವು ಆಶ್ರಮದಲ್ಲಿ ಕೈ ಅಧ್ಯಕ್ಷನ ಹುಟ್ಟುಹಬ್ಬ ಆಚರಣೆ

ಮಾಲೂರು,ಫೆ.೨೦-ಗೋ ಆಶ್ರಮದ ಗೋವುಗಳಿಗೆ ಮೇವು ವಿತರಿಸಿ ಗೋಪೂಜೆ ಮಾಡುವ ಮೂಲಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಿ ಮಧುಸೂದನ್ ಅವರು ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಿರುವುದು ಉತ್ತಮ ರೀತಿಯ ಬೆಳವಣಿಗೆಯಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಮಾಲೂರು ಹೊಸಕೋಟೆ ರಸ್ತೆಯ ಗಂಗಾಪುರ ಗೇಟ್ ಬಳಿ ಇರುವ ಶ್ರೀರಾಮಚಂದ್ರಪುರ ಮಠದ ಗೋ ಆಶ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಜಿ ಮಧುಸೂಧನ್ ಅವರ ಹುಟ್ಟು ಹಬ್ಬದ ಅಂಗವಾಗಿ ಅವರು ಅವರ ಬೆಂಬಲಿಗರ ಸಹಕಾರದೊಂದಿಗೆ ಗೋವುಗಳಿಗೆ ಗೋಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹುಟ್ಟುಹಬ್ಬದ ಶುಭಾಶಯ ಕೋರಿ ಮಾತನಾಡಿದರು,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಜಿ ಮಧುಸೂದನ್ ಅವರ ಕುಟುಂದ ತಾತ, ತಂದೆ,ಬಹಳ ಇಂದಿನಿಂದ ಕಾಂಗ್ರೆಸ್ ಪಕ್ಷದಲ್ಲಿ ಪಕ್ಷ ಕಟ್ಟಿ ಬೆಳಸಲು ಶ್ರಮಿಸಿದ್ದಾರೆ ಎಂಜಿ ಮಧುಸೂದನವರು ಯುವಕರಾಗಿದ್ದು ಅವರು ಸಹ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಸಂಘಟನೆಗೆ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ ಅವರ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಅವರಿಗೆ ಭಗವಂತ ಹೆಚ್ಚಿನ ಆಯಸ್ಸು, ಆರೋಗ್ಯ ನೆಮ್ಮದಿ ನೀಡಿ ರಾಜಕೀಯವಾಗಿಯೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಜಿ ಮಧುಸೂದನ್ ಮಾತನಾಡಿ ಶಾಸಕ ಕೆ ವೈ ನಂಜೇಗೌಡರ ಆಶೀರ್ವಾದ ಹಾಗೂ ಕಾಂಗ್ರೆಸ್ ಪಕ್ಷದ ವರಿಷ್ಠರು ಮುಖಂಡರ ಸಹಕಾರ ದಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಶಾಸಕರ ಕೈ ಬಲಪಡಿಸಲಾಗುತ್ತಿದೆ ತಾಲೂಕಿನಲ್ಲಿ ಉತ್ತಮ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವ ಶಾಸಕ ಕೆ ವೈ ನಂಜೇಗೌಡ ಅವರನ್ನು ಎರಡನೇ ಬಾರಿಗೆ ಶಾಸಕರನ್ನಾಗಿ ಆಯ್ಕೆ ಮಾಡಲು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಒಗ್ಗಟ್ಟಾಗಿಸಿ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡಲಾಗುತ್ತಿದೆ ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ನನ್ನ ಅಭಿಮಾನಿಗಳು ಹಿತೈಷಿಗಳು ಸ್ನೇಹಿತರು ಪಕ್ಷಾತೀತವಾಗಿ ಹುಟ್ಟುಹಬ್ಬಕ್ಕೆ ಆಗಮಿಸಿ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ ಅವರ ಪ್ರೀತಿಗೆ ಚಿರ ಋಣಿ ಯಾಗಿರುವುದಾಗಿ ಹೇಳಿದರು