ಗೋವಿನ ಜೋಳದ ಬೆಳೆಯಲ್ಲಿ ಫಾಲ್ ಸೈನಿಕ ಹುಳುವಿನ ಬಾಧೆ

ವಿಜಯಪುರ, ಜು.20-ಜಿಲ್ಲೆಯ ವಿವಿಧ ತಾಲೂಕಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಗೋವಿನ ಜೊಳದÀ ಬೆಳೆಯಲ್ಲಿ ಪರಕೀಯ ಹಾಗೂ ಆಕ್ರಮಣಕಾರಿ ಕೀಟ ಫಾಲ್ ಸೈನಿಕ ಹುಳು ಸ್ಪೋಡಾಪ್ಟೀರಾ ಫ್ರೂಜಿಫೆರಡಾ ಹಾವಳಿ ಕಂಡುಬಂದಿದೆ. ಸದರಿ ಕೀಟವು ಬೆಳೆಯ ಸುಳಿಯಲ್ಲಿ ಇದ್ದು ಹಗಲು ರಾತ್ರಿ ಇಡೀ ಚಟುವಟಿಕೆಯಿಂದ ಕೂಡಿದ್ದು ಎಲೆ ತಿನ್ನುತ್ತಾ ಹಾನಿ ಮಾಡುತ್ತಿದೆ. ಈ ಕೀಟವು ವಿಶೇಷವಾಗಿ ಆಹಾರ ಧಾನ್ಯಗಳ ಬೆಳೆಗಳಾದ ಗೋವಿನ ಜೋಳ, ಜೋಳ ಹಾಗೂ ಇತರ ಬೆಳೆಗಳನ್ನು ಬಾಧಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಮೋಡ ಕವಿದ ಹಾಗೂ ತುಂತುರ ಮಳೆಯಿಂದ ಕೂಡಿದ ವಾತಾವರಣ ಇರುವುದರಿಂದ ಈ ಕೀಟದ ಪಸರಿಸಿರುವಿಕೆ ಇನ್ನೂ ಹೆಚ್ಚಾಗಿದೆ. ಈ ಕೀಟವು ತನ್ನ ಜೀವನ ಚಕ್ರವನ್ನು 30-40 ದಿವಸಗಳಲ್ಲಿ ಪೂರ್ಣಗೊಳಿಸಬಲ್ಲದಾಗಿದ್ದು ಫ್ರೌಢ ಪತಂಗವು ಒಂದು ರಾತ್ರಿಯಲ್ಲಿ ಕನಿಷ್ಠ 100 ಕಿ.ಮೀ ದೂರವನ್ನು ಕ್ರಮಿಸಬಲ್ಲದು. ಎಂದು ಕೃಷಿ ವಿಜ್ಞಾನ ಕೇಂದ್ರ ಇಂಡಿಯ ಕೀಟಶಾಸ್ತ್ರಜ್ಞರಾದ ಡಾ. ಅರ್ಜುನ ಸೂಲಗಿತ್ತಿ ತಿಳಿಸಿದರು.
ಬಾಧೆಯ ಲಕ್ಷಣಗಳುಃ ತತ್ತಿಯಿಂದ ಹೊರಬಂದ ಮರಿಹುಳುಗಳು ಸಮೂಹವಾಸಿಯಾಗಿದ್ದು ಮೊದಲು ಮೊಟ್ಟೆಯ/ ತತ್ತಿಯ ಸಿಪ್ಪೆಯನ್ನೆ ತಿಂದು ಬದುಕುವವು. ತದನಂತರ ಗೋವಿನ ಜೋಳದ ಸುಳಿಯಲ್ಲಿ ಉಳಿದುಕೊಂಡು ಸಸ್ಯಗಳ ಹರಿತ್ತನ್ನು ಕೆರೆದು ತಿಂದು ಬದುಕುತ್ತವೆ. ಇಂತಹ ಎಲೆಗಳು ಜಾಳು ಜಾಳಾಗಿದ್ದು ಅಸ್ಥಿಪಂಜರದಂತೆ ಗೋಚರಿಸಿ ಎಲೆಗಳಲ್ಲಿ ದೊಡ್ಡ ದೊಡ್ಡ ಹಾಗೂ ಸಾಲಿನಲ್ಲಿರುವ ಕಿಡಕಿಗಳನ್ನು ಅಥವಾ ರಂಧ್ರಗಳನ್ನು ಕೊರೆಯುತ್ತದೆ. ನಂತರದ ದಿನಗಳಲ್ಲಿ ಮರಿಗಳು ದೊಡ್ಡವಾದಾಗ ಸುಳಿ ಮತ್ತು ಎಲೆಗಳನ್ನು ತಿಂದು ಗಟ್ಟಿಯಾದ ಹಿಕ್ಕೆಗಳನ್ನು ಎಲೆಗಳ ಮೇಲೆ ಮತ್ತು ಸುಳಿಯಲ್ಲಿ ಕಾಣಬಹುದು.
ಸಮಗ್ರ ಕೀಟ ನಿರ್ವಹರ್ಣಾ ಕ್ರಮಗಳುಃ 1) ಬೆಳೆ ಕಟಾವಾದ ನಂತರ ಮಾಗಿ ಉಳುಮೆ ಮಾಡುವುದರಿಂದ ಕೋಶಗಳನ್ನು ಮಣ್ಣಿನ ಮೇಲ್ಪದರಕ್ಕೆ ತಂದು ಹಕ್ಕಿಗಳಿಗೆ ಹಾಗೂ ಬಿಸಿಲಿನ ಪ್ರಖರತೆಗೆ ಒಡ್ಡಿ ನಿಯಂತ್ರಿಸಬಹುದು, 2) ಶಿಪಾರಸ್ಸು ಮಾಡಿದ ಅವದಿಯಲ್ಲಿ ಬಿತ್ತನೆ ಕಾರ್ಯಕ್ರಮ ಪೂರ್ಣಗೊಳಿಸುವದು. ಹಂತ ಹಂತವಾಗಿ ಬಿತ್ತನೆಯಾದಲ್ಲಿ ಕೀಟಕ್ಕೆ ನಿರಂತರವಾಗಿ ಆಹಾರ ಲಭ್ಯೆವಾಗಲಿದ್ದು, ಹಲವಾರು ಸಂತತಿಗಳನ್ನು ಬೆಳೆಯ ಹಂತದಲ್ಲಿ ಕಾಣಬಹುದು, ಇದರಿಂದ ನಷ್ಟದ ಪ್ರಮಾಣ ಹೆಚ್ಚಾಗುವುದು, 3) ಮೋಹಕ ಬಲೆಗಳನ್ನು ಪ್ರತಿ ಎಕರೆಗೆ 10-12ರಂತೆ ಹಾಕಿ ಚಿಟ್ಟೆಗಳನ್ನು ಆಕರ್ಷಿಸಿ ನಾಶಪಡಿಸಬೇಕು ಮತ್ತು ಪೀಡೆ ಸಮಿಕ್ಷೆಯನ್ನು ಕೈಗೊಂಡು ಕೀಟದ ಉಪಸ್ಥಿ ಮತ್ತು ಹರಡುವಿಕೆ ಬಗ್ಗೆ ನಿಗಾವಹಿಸುವುದು, 4) ಕೀಟಬಾಧೆ ತಿವ್ರತೆ ಕಡಿಮೆ ಇದ್ದಾಗ ಅಥವಾ ಮರಿಹುಳುಗಳ ನಿರ್ವಹಣೆಗೆ ಜೈವಿಕ ಕೀಟನಾಶಕವಾದ ನೊಮೊರಿಯಾ(ಮೆಟರೈಝಿಯಂ) ರಿಲೈಯೆ, ಶಿಲೀಂಧ್ರವನ್ನು 2 ಗ್ರಾಂ ಅಥವಾ ಬ್ಯಾಸಿಲಸ್ ಥುರಿಂಜಿಯಸ್ 2 ಗ್ರಾಂ ಅಥವಾ ಶೇ 5 ರ ಬೇವಿನ ಬೀಜದ ಕಷಾಯ/ ಅಜಾಡಿರೆಕ್ಟಿನ 1500 ಪಿಪಿಎಮ್@ 5ಮಿ.ಲೀ ಪ್ರತಿ ಲೀಟರ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು, 5. ಕೀಟದ ಬಾಧೆ ಶೇ 10 ಕಿಂತ ಹೆಚ್ಚಿಗೆ ಇರುವಾಗ 0.3 ಗ್ರಾಂ ಇಮಾಮೆಕ್ಟಿನ್ ಬೆಂಜೋಯೇಟ್@ 5% ಎಸ್.ಜಿ. ಅಥವಾ ಕೋರ್ಯಾಂಟ್ರಿನಿಲಿಪ್ರೊಲ್ 18.5 ಎಸ್.ಸಿ @ 0.25 ಮಿ.ಲೀ ಆಥವಾ ಸ್ಪಿನೋಟೊರಮ 11.7 ಎಸ್.ಸಿ @ 0.5 ಮಿ.ಲೀ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.
ರೈತರಿಗೆ ಸಲಹೆ-ಅತೀ ಮಳೆಃ ಸಂಕಷ್ಟ ಕಾಲದಲ್ಲಿ ರೈತರಿಗೆ ಬೆಳೆ ನಿರ್ವಹಣೆಗಾಗಿ ಕೆಲವು ಸಲಹೆಗಳು
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಗಾರು ಬೆಳೆಗಳು ಹಾಳಾಗುವ ಆತಂಕ ಎದುರಾಗಿದೆ. ಕಳೇದ ಎರಡು ಮುರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಮೀನಿಗ¼ಲ್ಲಿ ಬೆಳೆಗಳ ಮಧ್ಯ ನೀರು ಸಂಗ್ರವಾಗಿದೆ. ಹೀಗಾಗಿ ಮುಂಗಾರಿನ ಹೆಸರು, ಉದ್ದು, ಸೋಯಾಅವರೆ ಮತ್ತು ತೋಗರಿ ಬೆಳೆಗಳು ಹಾಳಾಗುವ ಆತಂಕ ರೈತರಲ್ಲಿ ಶುರವಾಗಿದೆ.
ನಿರಂತರವಾಗಿ ಜಿಟಿ ಜಿಟಿ ಮಳೆಯಿಂದಾಗಿ ಬೆಳೆಗಳಲ್ಲಿ ಹೆಚ್ಚಿನ ನೀರು ಸಂಗ್ರವಾಗಿರುವುದರಿಂದ ಗಿಡಗಳ ಬೇರುಗಳಿಗೆ ಗಾಳಿ, ಬೆಳಕು ಸರಿಯಾಗಿ ಸಿಗುತ್ತಿಲ್ಲ ಪೌಷ್ಠಿಕಾಂಶ ಸರಿಯಾಗಿ ಲಭಿಸದ ಹಿನ್ನಲೆಯಲ್ಲಿ ಬೆಳೆಗಳ ಎಲೆಗಳು ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಎಲೆಗಳು ಹಳದಿಯಾದ ಬಳಿಕ ಭೂಮಿಯಲ್ಲಿ ತೇವಾಂಶ ಉಳಿದರೆ ಜೊತೆಗೆ ಮಳೆ ಎಂದಿನಂತೆ ಮುಂದುವರೆದರೆ ಗಿಡಗಳು, ಒಣಗುವ ಸಾದ್ಯೆತೆಯೂ ಇದೆ ಎಂದು ಕೃಷಿ ವಿಜ್ಞಾನ ಕೇಂದ್ರ ಇಂಡಿಯ ವಿಜ್ಞಾನಿಗಳು ಸೂಚಿಸಿದ್ದಾರೆ.· ಮಳೆಯ ನೀರು ಬೆಳೆಗಳಲ್ಲಿ ಸಂಗ್ರಹವಾದರೆ ರೈತರು ಕುಡಲೇ ಜಮೀನಿನಿಂದ ನೀರು ಹೋರ ಹೋಗುವ ವ್ಯವಸ್ಥೆ ಮಾಡಬೇಕು. ಜಮೀನಿನ ಸುತ್ತಲೂ ತೆಗ್ಗು ತೋಡಿ ನೀರು ಹೋಗಲು ದಾರಿ ಮಾಡಿಕೊಡಬೇಕು. ಜೋತೆಗೆ ಹೊಲಗಳಲ್ಲಿ ತೇವಾಂಶ ಹೆಚ್ಚಿಗಿರುವ ಕಾರಣ ರೈತರು ಬೆಳೆಗಳಿಗೆ 19;19;19 ಗೊಬ್ಬರವನ್ನು ಪ್ರತಿ ಲೀಟರ ನೀರಿಗೆ 5 ರಿಂದ 10 ಗ್ರಾಂ ನಂತೆ ನೀರಿನಲ್ಲಿ ಕರಗಿಸಿ ಬೆಳೆಗಳ ಮೇಲೆ ಸಿಂಪಡಣೆ ಮಾಡಬೇಕು. ಇದರೊಟ್ಟಿಗೆ ಮಳೆ ನಿಂತÀ ತಕ್ಷಣ ಯೂರಿಯಾ ಗೊಬ್ಬರವನ್ನು ಬೆಳೆಗಳಿಗೆ ಕೊಡುವುದರಿಂದ ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಬಹುದು.
ಹೆಸರ ಮತ್ತು ಉದ್ದಿನ ಬೆಳೆಯಲ್ಲಿ ಬಿಳಿ ನೊಣ ಮತ್ತು ಸಸ್ಯ ಹೇನಿನ ಬಾಧೆಯು ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಹಳದಿ ನಂಜಾಣು ರೋಗವು ಹರಡುವ ಸಾದ್ಯತೆ ಹೆಚ್ಚಾಗಿದ್ದು ನಿರ್ವಹಣೆಗಾಗಿ ರೋಗಕ್ಕೆ ತುತ್ತಾದ ಸಸ್ಯಗಳನ್ನು ಪ್ರಾರಂಭದ ಹಂತದಲ್ಲಿಯೇ ಗುರುತಿಸಿ ಕಿತ್ತ ಮಣ್ಣಿನಲ್ಲಿ ಹೂಳಬೇಕು. ಈ ರೋಗವನ್ನು ಹರಡುವ ವಾಹಕಗಳನ್ನು ಹತೋಟಿ ಮಾಡಲು ಪ್ರತಿ ಲೀ. ನೀರಿಗೆ 0.2 ಮಿ.ಲೀ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಅಥವಾ 0.3 ಗ್ರಾ ಥೈಯಾಮಿಥಾಕ್ಷಾಮ್ 25 ಡಬ್ಲೂ.ಜಿ ಅಥವಾ 1 ಮಿ.ಲೀ ಮೊನೋಕ್ರೋಟೊಫಾಸ್ 36 ಎಸ್.ಎಲ್ ಅಥವಾ ಡೈಮಿಥೋಯೇಟ್ 30 ಇ.ಸಿ @1.7 ಮಿ.ಲೀ ಬೆರೆಸಿ ಸಿಂಪಡಿಸಬೇಕು. ಎಲೆ ತಿನ್ನುವ ಮತ್ತು ಕೊಂಬಿನ ಹುಳುವಿನ ಹತೋಟಿಗಾಗಿ; 1 ಮಿ.ಲೀ ಮೊನೋಕ್ರೋಟೊಫಾಸ್ 36 ಎಸ್.ಎಲ್ ಅಥವಾ 2 ಮಿ.ಲೀ ಕ್ಲೋರ್‍ಪೈರಿಫಾಸ್ 20 ಇ.ಸಿ ಅಥವಾ ಡೈಮಿಥೋಯೇಟ್ 30 ಇ.ಸಿ @1.7 ಮಿ.ಲೀ ಬೆರೆಸಿ ಸಿಂಪಡಿಸಬೇಕು. ಸೂರ್ಯಕಾಂತಿ ಬೆಳೆಯಲ್ಲಿ ರಸ ಹೀರುವ ಕೀಟಗಳ ನಿರ್ವಹಣೆಗಾಗಿ ಪ್ರತಿ 3 ಕಿ.ಗ್ರಾಂ ಬೀಜಕ್ಕೆ 10 ಮಿ.ಲೀ ಥಯಾಮೆಥಾಕ್ಸಾಮ್ ಶೇ.30 ಎಫ್.ಎಸ್ ಅಥವಾ ಪ್ರತಿ ಕಿ.ಗ್ರಾಂ ಬೀಜಕ್ಕೆ 2 ಮಿ.ಲೀ ಕ್ಲೋರಪೈರಿಪಾಸ್ 20 ಇ.ಸಿ ನಿಂದ ಬೀಜೋಪಚಾರ ಮಾಡಿ ಬಿತ್ತಬೇಕು. ಎಲೆ ತಿನ್ನುವ ಕೀಟಗಳ(ಸ್ಪೋಡಾಪ್ಟೆರಾ, ಕಂಬಳಿಹುಳು) ಹತೋಟಿಗಾಗಿ ಸ್ಪೋಡಾಪ್ಟೆರಾ, ಕಂಬಳಿಹುಳುಗಳ ತತ್ತಿಗಳ ಹಾಗೂ ಮರಿ ಕೀಟಗಳ ಗುಂಪನ್ನು ಎಲೆಯಿಂದ ತೆಗೆದು ನಾಶಪಡಿಸಬೇಕು. ಪ್ರತಿ ಲೀ ನೀರಿನಲ್ಲಿ 0.5 ಮಿ.ಲೀ ಲ್ಯಾಮ್ಡಾ ಸೈಲೋಥ್ರೀನ್ 5 ಇ.ಸಿ ಅಥವಾ 2 ಮಿ.ಲೀ ಕ್ವಿನಾಲಫಾಸ್ 25 ಇ.ಸಿ ಆಥವಾ 0.1 ಮಿ.ಲೀ ಸ್ಪೈನೋಸ್ಯಾಡ್ 45 ಎಸ್.ಪಿ ಪ್ರತಿ ಲೀಟರ ನೀರಲ್ಲಿ ಬೆರಸಿ ಸಿಂಪರಣೆ ಮಾಡಬೇಕು.