ಗೋವಿಂದ್‌ಗೆ ಶಿಕ್ಷಣ ಸಾರಥಿ’ ಪ್ರಶಸ್ತಿ

ಕೋಲಾರ, ಜು.೨೮: ತಾಲ್ಲೂಕಿನ ನರಸಾಪುರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಯು.ಗೋವಿಂದ್ ಅವರಿಗೆ ೨೦೨೧-೨೨ನೇ ಸಾಲಿನ ಶಿಕ್ಷಣ ಸಾರಥಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ತುಮಕೂರು ನಗರದ ಸಿದ್ದಗಂಗಾ ಮಠದ ಆವರಣದಲ್ಲಿನ ಉದ್ಧಾನೇಶ್ವರ ಕಲ್ಯಾಣ ಮಂಟಪದಲ್ಲಿ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್,ಮೈಸೂರು ಇವರಿಂದ ನಡೆದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಅವರಿಗೆ ಶಿಕ್ಷಣ ಸಾರಥಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಮಾಡಿರುವ ಗಣನೀಯ ಸೇವೆ ಹಾಗೂ ವಿದ್ಯಾರ್ಥಿಗಳು,ಶಿಕ್ಷಕರಿಗೆ ಉತ್ತಮ ಶೈಕ್ಷಣಿಕ ಮಾರ್ಗದರ್ಶನ ನೀಡಿ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಅಭಿವೃದ್ದಿಗೆ ನಿಸ್ವಾರ್ಥ,ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಿ ಈ ಸಾಲಿನ ರಾಜ್ಯಮಟ್ಟದ ಉತ್ತಮ ಸಿಆರ್‍ಪಿ ಎಂದು ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಅವರನ್ನು ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ, ವೀರಣ್ಣಗೌಡ, ಇಸಿಒ ಆರ್.ಶ್ರೀನಿವಾಸನ್, ಶಿಕ್ಷಕರಾದ ರಾಮಪ್ಪ, ಸೊಣ್ಣೇಗೌಡ, ಮುಖ್ಯಶಿಕ್ಷಕ ನಾರಾಯಣಸ್ವಾಮಿ, ವೆಂಕಟರಾಂ, ವೆಂಕಟಾಚಲಪತಿಗೌಡ ಮತ್ತಿತರರು ಅಭಿನಂದಿಸಿದರು.