ಗೋವಿಂದಗಿರಿ ಅಂಗನವಾಡಿ ಕೇಂದ್ರದ  ನೂತನ ಕಟ್ಟಡ ಉದ್ಘಾಟನೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ.2 :-      ಪಟ್ಟಣ ಪಂಚಾಯತಿ   ವ್ಯಾಪ್ತಿಯ 20ನೇವಾರ್ಡಿನ ಗೋವಿಂದ ಗಿರಿ ಗೊಲ್ಲರಟ್ಟಿ ಅಂಗನವಾಡಿ ಕೇಂದ್ರ ನೂತನ ಕಟ್ಟಡಕ್ಕೆ   ಪೂಜೆ  ಸಲ್ಲಿಸುವ   ಮೂಲಕ ಮಕ್ಕಳಿಗೆ ಮೇಲಾಧಿಕಾರಿಯ ಆದೇಶದ ಮೇರೆಗೆ ಹೊಸ ಕಟ್ಟಡದಲ್ಲಿ ಆಟ ಪಾಠ  ಪ್ರಾರಂಭ ಮಾಡಲಾಯಿತು.
ಗ್ರಾಮದ ಮುಖಂಡರಾದ  ಡಿ ಬಿ ಚಿತ್ತಪ್ಪ  ಮಹಾಲಿಂಗಪ್ಪ, ದೊಡ್ಡಪ್ಪ, ಬೊಮ್ಮಯ್ಯ,  ಚಿತ್ತಪ್ಪ ಹಾಗೂ ಪಟ್ಟಣ ಪಂಚಾಯತಿ ಸದಸ್ಯ  ಬಾಸುನಾಯ್ಕ್  ನೆರವೇರಿಸಿದರು. ಈ ಸಂದರ್ಭದಲ್ಲಿ   ಪಕ್ಕದ ಶಾಲೆಯ ಶಿಕ್ಷಕರಾದ ಎಂ ವಿಜಯಲಕ್ಷ್ಮಿ ಅಶೋಕ್ ಬಾಬುರಾವ್,
ಸುಲೋಚನಾ , ರಶ್ಮಿ, ಮೀನಾಕ್ಷಿ , ಹಾಗೂ ಗ್ರಾಮದ  ಮಹಾಂಕಾಳಮ್ಮ ಲಕ್ಷ್ಮಿ ಬೊಮ್ಮಕ್ಕ ಚಿತ್ತಜ್ಜಿ ಹಾಗೂ ಮುದ್ದು ಮಕ್ಕಳು ಗ್ರಾಮಸ್ಥರು  ಪಾಲ್ಗೊಂಡಿದ್ದರು.