ಗೋವಿಂದಗಾನ : ಸಾಧಕರಿಗೆ ಸನ್ಮಾನ

ರಾಯಚೂರು.ಡಿ.೨೮- ಹರಿದಾಸಸೇವಾ ಇಂಟರನ್ಯಾಷನಲ್ ಟ್ರಸ್ಟ್ ಬೆಂಗಳೂರು ಇವರು ಇದೇ ಜ. ೦೩ ರವಿವಾರ ರಂದು ಸ್ಟೇಷನ್‌ರಸ್ತೆಯ ರಂಗಮಂದಿರ ರಾಯಚೂರುನಲ್ಲಿ ಸಂಜೆ ೪:೩೦ ರಿಂದ ಖ್ಯಾತ ಗಾಯಕ ಡಾ.ರಾಯಚೂರು ಶೇಷಗಿರಿದಾಸ ಇವರ ನೇತೃತೃದಲ್ಲಿ ಶ್ರೀ ಅಸ್ಕಿಹಾಳ ಗೋವಿಂದ ದಾಸರ ಸ್ಮರಣೋತ್ಸದ ಅಂಗವಾಗಿ ಗೋವಿಂದಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರದಲ್ಲಿ ದಾಸಸಾಹಿತ್ಯ ಸಾಧಕರಿಗೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಕಾರ್ಯಕ್ರಮದ ಸಾನಿಧ್ಯವಹಿಸುವ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರು ಸನ್ಮಾನಿಸಿ ಆರ್ಶೀವದಿಸಲಿದ್ದಾರೆ.
ಈ ಬಾರಿ ಸಿರಿ ಗೋವಿಂದ ವಿಠಲ ಪ್ರಶಸ್ತಿಯನ್ನು ಕೊಪ್ಪಳದ ದಾಸ-ವ್ಯಾಸ ಸಾಹಿತ್ಯದಲ್ಲಿ ಸಾಧನೆ ಮಾಡಿದ ಅಸ್ಕಿಹಾಳಗೋವಿಂದದಾಸರ ಶಿಷ್ಯರಾದ ಇಟಗಿ ಅನಂತಾಚಾರ್ಯರಿಂದ ಶ್ರೀ ವಿಠಲ ಅಂಕಿತವನ್ನು ಪಡೆದು ಶ್ರೀ ಹರಿಕಥಾಮೃತಸಾರದಲ್ಲಿ ಆಳವಾದ ಅಧ್ಯಯನ ಮಾಡಿ ಹಲವಾರು ಕೃತಿಗಳನ್ನು ರಚಿಸಿದ, ಶ್ರೀ ರಘುಪ್ರೇಮಾಚಾರ ಕೊಪ್ಪಳ ಇವರಿಗೆ ಪ್ರಶಿಸ್ತಿ ನೀಡಿ ಸನ್ಮಾನಿಸಿಲಾಗುವುದು.
ಸನ್ಮಾನಿತರ ಸಾಲಿನಲ್ಲಿ ನಗರದ ಪಂಡಿತರಾದ ವೆ||ಮೂ||ಪಂ|| ಮುರಳೀಧರಾಚಾರ್ಯಗಲಗಲಿ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ||ಹರೀಷಮೂರ್ತಿ, ಮತ್ತು ದಾಸಸಾಹಿತ್ಯದಲ್ಲಿ ಸಾಧನೆ ಮಾಡಿ ಪಿಎಚ್‌ಡಿ ಪಡೆದು ಹಲವಾರು ದಾಸ ಸಾಹಿತ್ಯದಲ್ಲಿ ಕೃತಿ ರಚನೆ ಮಾಡಿದ ಡಾ.ವಿದ್ಯಾಕಸ್ಬೆ ಇವರನ್ನು ಸನ್ಮಾನಿಸಿ ಅಭಿನಂದಿಸಲಾಗುವುದೆಂದು ಸಂಚಾಲಕರಾದ ಗಾಯಕ ಡಾ.ರಾಯಚೂರು ಶೇಷಗಿರಿದಾಸ ಹಾಗೂ ಸಹ-ಸಂಚಾಲಕರಾದ ಮುರಳಿಧರ ಕುಲಕರ್ಣಿ ತಿಳಿಸಿದ್ದಾರೆ.