ಗೋವಾದಲ್ಲಿ ಜೂ. 7ರತನಕ ಲಾಕ್ ಡೌನ್ ವಿಸ್ತರಣೆ

ಪಣಜಿ, ಮೇ 29-ಗೋವಾದಲ್ಲಿ ಇನ್ನೊಂದು ವಾರಗಳ ಲಾಕ್ ಡೌನ್ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ. ಜೂನ್ 7 ರವರೆಗೆ ಕರ್ಫ್ಯೂ ವಿಸ್ತರಣೆ ಮಾಡುವ ಕುರಿತಂತೆ ರಾಜ್ಯ ಸರ್ಕಾರ ನಿರ್ಣಯ ತೆಗೆದುಕೊಂಡಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಈಗಿರುವ ನಿಯಮಗಳಂತೆಯೇ ರಾಜ್ಯದಲ್ಲಿ ಜೂನ್ 7 ರ ಬೆಳಿಗ್ಗೆ 7 ಗಂಟೆಯವರೆಗೆ ಕರ್ಫ್ಯೂ ವಿಸ್ತರಣೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಈ ಆದೇಶ ಜಾರಿಗೊಳಿಸಲಿದ್ದಾರೆ ಎಂಬ ಮಾಹಿತಿ ನೀಡಿದರು.
ಸದ್ಯ ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾನ್ಹ 1 ಗಂಟೆಯವರೆಗೆ ಜೀವನಾವಶ್ಯಕ ವಸ್ತುಗಳ ಮಾರಾಟದ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ವಿವಿಧ ಉದ್ಯೋಗಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ವಾರದ ಸಂತೆ ಮತ್ತು ಮೀನು ಮಾರುಕಟ್ಟೆ ಬಂದ್ ಮಾಡಲಾಗಿದೆ. ಸಿನೆಮಾ ಥಿಯೇಟರ್, ಈಜುಕೊಳ, ಕ್ಯಾಸಿನೊ, ಸಾಂಸ್ಕೃಂತಿಕ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮಗಳನ್ನು ಬಂದ್ ಮಾಡಲಾಗಿದೆ. ಇದೇ ನಿಯಮಾವಳಿಗಳು ಇನ್ನೂ ಏಳು ದಿನಗಳ ಕಾಲ ಮುಂದುವರೆಯಲಿದೆ.