ಗೋಳೂರು ಗ್ರಾಮದಲ್ಲಿ ನೀರಿಗಾಗಿ ಪ್ರತಿಭಟನೆ

ನಂಜನಗೂಡು, ನ.14: ತಾಲೂಕಿನ ಗೋಳೂರು ಗ್ರಾಮದಲ್ಲಿ ಎರಡು-ಮೂರು ತಿಂಗಳಿಂದ ನೀರಿಲ್ಲದೆ ಪರದಾಡುವಂತಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮುಂದಶೆಟ್ಟಿ ಆರೋಪಿಸಿ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಗ್ರಾಮದವರನ್ನು ಒಳಗೊಂಡು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುದ್ದ ಮಾದಶೆಟ್ಟಿ ನಮ್ಮ ಗ್ರಾಮದಲ್ಲಿ ಕಳೆದ ಮೂರು ತಿಂಗಳಿಂದ ನೀರಿಲ್ಲದೆ ಪರದಾಡುವಂತಾಗಿದೆ ಜೊತೆಗೆ ನೀರಿನ ವಾಟರ್ ಮ್ಯಾನ್ ಅನಾರೋಗ್ಯದಿಂದ ಇದ್ದಾರೆ. ಇದರ ಬಗ್ಗೆ ನಾವು ಮಾಹಿತಿ ಅಧಿಕಾರಿಗಳು ತಿಳಿಸಿದರು ಪ್ರಯೋಜನವಿಲ್ಲ ತಾಲೂಕು ಪಂಚಾಯಿತಿ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಗ್ರಾಮದಲ್ಲಿ ಕುಡಿಯಲು ನೀರಿಲ್ಲದೆ ಬಹಳ ತೊಂದರೆ ಆಗಿದೆ ದೀಪಾವಳಿ ಹಬ್ಬ ಬಂದಿದೆ. ಗ್ರಾಮದವರು ಕಪಿಲಾ ನದಿಗೆ ಬಂದು ನೀರನ್ನು ತರುವ ಉಂಟಾಗಿದೆ ಇದರ ಬಗ್ಗೆ ತಾಲೂಕು ಪಂಚಾಯತಿ ಅಧ್ಯಕ್ಷರಿಗೆ ಗಮನಕ್ಕೆ ತಂದಿದ್ದು ಯಾವುದೇ ಪ್ರಯೋಜನವಿಲ್ಲ ಕುಂಟು ನೆಪ ಹೇಳಿಕೊಂಡು ಕಾಲಕಳೆಯುತ್ತಿದ್ದಾರೆ. ಇದರ ಜೊತೆಗೆ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿದೆ ಜೊತೆಗೆ ಬೀದಿ ದೀಪ ಇಲ್ಲ ಈ ರೀತಿ ಗ್ರಾಮದಲ್ಲಿ ಅನೇಕ ತೊಂದರೆಗಳು ಮೂರು ತಿಂಗಳಿಂದ ಕಾಡುತ್ತಿದೆ ಯಾವ ಅಧಿಕಾರಿಗಳು ಕೂಡ ದೂರು ನೀಡಿದರು ಗ್ರಾಮಕ್ಕೆ ಬಂದು ಪರಿಹಾರ ಒದಗಿಸಿಲ್ಲ ಆದ್ದರಿಂದ ಗ್ರಾಮದವರು ಸೇರಿಕೊಂಡು ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ದಿಕ್ಕಾರ ಪ್ರತಿಭಟನೆ ಮಾಡಿದ್ದೇವೆ ಎಂದು ತಿಳಿಸಿದರು.
ಇದೇ ರೀತಿ ಮುಂದುವರೆದರೆ ಇಡೀ ಗ್ರಾಮವೇ ಬಂದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳು ತಕ್ಷಣ ಗ್ರಾಮಕ್ಕೆ ಬಂದು ಇಲ್ಲಿರುವ ತೊಂದರೆಗಳನ್ನು ಪರಿಹಾರ ಮಾಡಿಕೊಡುತ್ತಾರೆ ಎಂದು ನಂಬಿಕೆ ಇದೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಪ್ರತಿಭಟನೆ ಸ್ಥಳಕ್ಕೆ ಅಧಿಕಾರಿಗಳು ಬಂದು ತಕ್ಷಣ ಗ್ರಾಮಕ್ಕೆ ಬಂದು ಸೂಕ್ತ ಕ್ರಮ ಕೈಗೊಳ್ಳುತ್ತವೆ ಎಂದರು ಆದ್ದರಿಂದ ಪ್ರತಿಭಟನೆ ಕೈಬಿಟ್ಟರು.