ಗೋಳಸಾರ ಮಠಕ್ಕೆ ಭಕ್ತರೇ ದೊಡ್ಡ ಆಸ್ತಿ : ಕೋಳೂರ ಶ್ಯಾಸ್ತ್ರಿಗಳು

(ಸಂಜೆವಾಣಿ ವಾರ್ತೆ)
ಇಂಡಿ:ಜು.18: ಗೋಳಸಾರ ಮಠಕ್ಕೆ ಭಕ್ತರೇ ದೊಡ್ಡ ಆಸ್ತಿ, ಅದನ್ನು ಬಿಟ್ಟು ಬೇರೆ ಯಾವದೂ ಅಲ್ಲ, ಪುಂಡಲಿಂಗ ಶ್ರೀಗಳು, ತ್ರಿಮೂರ್ತಿ ಶ್ರೀಗಳು ಮನು ಕುಲದ ಉದ್ದಾರಕ್ಕಾಗಿ ಶ್ರಮಿಸಿದರು ಎಂದು ವೈ.ಬಿ.ಕೋಳೂರ ಶಾಸ್ತ್ರೀಗಳು ಹೇಳಿದರು.
ತಾಲೂಕಿನ ಗೋಳಸಾರ ಗ್ರಾಮದಶ್ರೀ ಪುಂಡಲಿಂಗ ಶಿವಯೋಗಿಗಳ ಮಠದಲ್ಲಿ ಭಾನುವಾರ ಹಮ್ಮಿಕೊಂಡ ಶ್ರೀ ಸದ್ಗುರು ಪುಂಡಲಿಂಗ ಶಿವಯೋಗಿಗಳ 43 ನೇ ಪುಣ್ಯಾರಾಧನೆಮಹೋತ್ಸವದ ಧರ್ಮ ಸಭೆಯಲ್ಲಿ ಮಾತನಾಡಿದರು.
ಬರೂರದ ಆನಂದ ಶಾಸ್ತ್ರೀಗಳು ಮಾತನಾಡಿ ಗೋಳಸಾರ ಮಠ ನಿರಂತರವಾಗಿ ಸಾಮಾಜಿಕ ಸೇವೆ ಮಾಡುತ್ತ ಬಂದಿದೆ.ಪುಂಡಲಿಂಗ ಶ್ರೀಗಳಿಂದ ಹಿಡಿದು ಇಂದಿನ ವರೆಗೆ ಶರಣ ಪರಂಪರೆ ಮಾಡುತ್ತಲೇ ತತ್ವ ಸಿದ್ದಾಂತ ತಿಳಿಸುತ್ತ ಸಾಮಜಿಕ ಸೇವೆ,ದಾಶೋಹ ಪದ್ಧತಿ ಸೇರಿದಂತೆ ನಾನಾ ರೀತಿಯ ಕಾರ್ಯಕ್ರಮಗಳನ್ನು ಅಂದಿನಿಂದ ಇಂದಿನ ವರೆಗೂ ನಡೆಸುತ್ತಲೇ ಇವೆ ಎಂದರು.
ಅರ್ಜುಣಗಿ ಜೈನಾಪುರ ಮಠದ ರೇಣುಕಾ ಶಿವಾಚಾರ್ಯರರು, ಎ.ಪಿ.ಕಾಗವಾಡಕರ, ರವೀಂದ್ರ ಆಳೂರ ಮಾತನಾಡಿದರು.
ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು,ರೋಡಗಿ ಮಠದ ಅಭಿನವ ಶಿವಲಿಂಗೇಶ್ವರ ಶ್ರೀಗಳು,ಸಾನಿಧ್ಯ ವಹಿಸಿದ ಯಂಕಂಚಿಯ ಮಲ್ಲಿಕಾರ್ಜುನ ಶ್ರೀಗಳು,ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ, ಶ್ರೀಮಂತ ಮೇತ್ರಿ,ಸಂಗಣ್ಣ ನಿಂಬರಗಿ,ಶಿವಲಿಂಗ ನಾಗಠಾಣ,ಜೆ.ಕೆ. ಇಂಗಳಗಿ, ಬಾಬುಗೌಡ ಪಾಟೀಲ,ಜೆ.ಬಿ.ಡೊಂಬಳಿ,ಎಂ.ಆರ್.ಪಾಟೀಲ,ಚನ್ನುಗೌಡ ಪಾಟೀಲ,ಮಹಾದೇವ ಕೆರೂಟಗಿ,ಆಲಿಂಗರಾಯ ಕುಮಸಗಿ ಮತ್ತಿತರಿದ್ದರು.