ಗೋಳಸಾರದಲ್ಲಿ ಸ್ಕೌಡ್ ಗೈಡ್ ಶಿಬಿರ

ಇಂಡಿ:ಜ.16: ತಾಲೂಕಿನ ಗೋಳಸಾರ ಗ್ರಾಮದಲ್ಲಿ ಶ್ರೀಪುಂಡಲಿಂಗೇಶ್ವರ ಮಠದಲ್ಲಿ ಶ್ರೀಸದ್ಗುರು ಚಿನ್ಯಮೂರ್ತಿ ತ್ರೀಮೋರ್ತಿ ಮಹಾಶಿವಯೋಗಿಗಳ 29ನೇ ಪುಣ್ಯರಾಧನೆ ದೀಪೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾರತ ಸ್ಕೌಟ್ ಗೈಡ್ ಮತ್ತು ಗೈಡ್ಸ್ ವಿಜಯಪೂರ ಜಿಲ್ಲೆಯ ಎಲ್ಲ ತಾಲೂಕಿನ 120 ರೋವರ್ಸ್ ಮತ್ತು ರೇಂಜರ್ಸ್ ಮಕ್ಕಳ 10 ನೇ ವರ್ಷದ ಜಿಲ್ಲಾ ಮಟ್ಟದ ಸೇವಾ ಶಿಬಿರದಲ್ಲಿ ಸ್ಕೌಡ್ ಗೈಡ್ ಅಧ್ಯಕ್ಷ ಡಾ. ಮಂಜುನಾಥ ಕೊಟ್ಟೇಣ್ಣವರ ಮಾತನಾಡುತ್ತಿರುವುದು.

ಸ್ಕೌಡ್ ಗೈಡ್ಸ ಒಂದು ರಾಷ್ಟ್ರೀಯ ಸ್ವಯಂ ಸಂಸ್ಥೆ  ರಾಷ್ಟ್ರೀ ಭಾವೈಕ್ಯೆಯ ಜೊತೆ ಸೇವಾ ಮನೋಭಾವನೆಯಿಂದ ಕೆಲಸ ಮಾಡಿದಾಗ ಮಾತ್ರ ಸಂಸ್ಥೆಗೆ ಬೆಲೆ ತರಲು ಸಾಧ್ಯೆ,ಕೇವಲ ಕಾಟಾಚಾರದ ಸರಕಾರದ ಯೋಜನೆಗಳಂತೆ ಆಗಬಾರದು ಪ್ರತಿಯೋಬ್ಬ ಸ್ಕೌಟ್ ಗೈಡ್ಸ್ ತರಬೇತುದಾರರು ಸ್ವಯಂ ಸೇವೆ ಸಲ್ಲಿಸಬೇಕು. ಸಂಕಷ್ಟದಲ್ಲಿ ಪ್ರಕೃತಿವಿಕೋಪ,ನೆರೆಹಾಔಲಿ, ಕ್ಷಾಮ ಇಂತಹ ಭೀಕರ ಭಯಾನಕ ಪರಸ್ಥಿತಿಯಲ್ಲಿ ಜೀವದ ಹಂಗು ತೊರೆದು ಶ್ರಮಿಸಬೇಕು.

ಸೇವೆಯಲ್ಲಿ ತೋಡಗಿದ ಮಕ್ಕಳ ಆರೋಗ್ಯ ವಿಚಾರಿಸಿದ ಅವರು ಸದೃಢ ಶರೀರದಲ್ಲಿ ಸದೃಢ ಮನಸ್ಸು ಇರುತ್ತದೆ. ವಿಧ್ಯಾರ್ಥಿಗಳು ಶುದ್ದ ಮನಸ್ಥಿತಿಯಿಂದ ಸಮಾಜ ಮುಖಿ ಕಾರ್ಯದಲ್ಲಿ ತೋಡಗಿ , ಒಂದು ದೇಶದ ಅಭಿವೃದ್ದಿಗೆ ಮಾನವ ಸಂಪನ್ಮೋಲ ಮುಖ್ಯ ಅದರಲ್ಲಿ ಯುವ ಸಮುದಾಯವೇ ದೇಶದ ಶಕ್ತಿ ,ಯುವಕರು ದುಶ್ಚಟಗಳಿಗೆ ಬಲಿಯಾಗಿ ಸುಂದರವಾದ ಶರೀರ ಹಾಳು ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.

ಬಿ.ಎಲ್.ಡಿ ಸಂಸ್ಥೆಯ ಖ್ಯಾತ ವೈದ್ಯ ಡಾ.ಸುರೇಶ ಅವರಾಧಿ, ಡಾ. ಅನೀಲ ಬಲಗೊಂಡ, ಜಿಲ್ಲಾ ಯುವ ಸಮೀತಿ ಉಪಾಧ್ಯಕ್ಷ ಶೋಭಾ ಕಬಾಡೆ, ಸದಸ್ಯರಾದ ದೀಪಾ ವಾಘೆ, ಜಿಲ್ಲಾ ಸಂಘಟಕ ರಾಜಶೇಖರ ಖೇಡಗಿ, ರೋವರ್ಸ್ ರೇಂಜರ್ಸ್ ಮಕ್ಕಳು ಇದ್ದರು.

ಈ ಸಂದರ್ಬದಲ್ಲಿ ಮುದ್ದೇಬಿಹಾಳ ಸ.ಪ್ರ.ದ ಮಹಾವಿಧ್ಯಾಲಯದ ವಿಧ್ಯಾರ್ಥಿ ಸಂಗಮೇಶ ತಳವಾರ ಇವರ ಜನ್ಮದಿನ ಆಚರಿಸಲಾಯಿತು.