ಗೋಳಗುಮ್ಮಟದ ಮೇಲಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

ವಿಜಯಪುರ ನ 16: ನಗರದ ಗೋಳಗುಮ್ಮಟದ ಮೇಲಿಂದ ಜಿಗಿದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
55 ವರ್ಷದ ಸಲೀಂ ತಿಕೋಟ್ಕರ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಗೋಳಗುಮ್ಮಟ ವೀಕ್ಷಣೆಗೆ ಹೋಗಿದ್ದ ಈ ವ್ಯಕ್ತಿ ಗೋಳಗುಮ್ಮಟದ ಮೇಲಿಂದ ಕೆಳಆವರಣಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.ಸ್ಥಳಕ್ಕೆ ಗೋಳಗುಮ್ಮಟ ಠಾಣೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.