ಕಲಬುರಗಿ,ಜು,15: ವಿಜಯಪುರ ಜಿಲ್ಲೆ,ಸಿಂದಗಿ ತಾಲೂಕಿನ ಗೋಲಗೇರಿಯ ಸದ್ಗುರು ಶಾಂತಾನಂದ ಸ್ವಾಮಿಗಳ ಮಠದಲ್ಲಿ
ಸದ್ಗುರು ಶಾಂತಾನಂದ ಸ್ವಾಮಿಗಳವರ ( ವೇ.ಬ್ರ.ಶ್ರೀ ಮಲ್ಲಣ್ಣ ಮುತ್ಯಾ) 34 ನೇ ಪುಣ್ಯಾರಾಧನೆ ನಿಮಿತ್ತ ಖ್ಯಾತ ಹಿಂದುಸ್ಥಾನಿ ಗಾಯಕ ಪಂ. ಹನುಮಂತರಾವ ಮಳ್ಳಿ ಅವರ ಸಂಗೀತ ಕಾರ್ಯಕ್ರಮ ಜರುಗಿತು.ಅವರು ಪ್ರಸ್ತುತ ಪಡಿಸಿದ ಶಾಸ್ತ್ರೀಯ ಗಾಯನ, ದಾಸವಾಣಿ,ವಚನ ಸಂಗೀತ ಕೇಳುಗರ ಮನಸೂರೆಗೊಂಡವು.ಕಲ್ಯಾಣಿ ಯಂಕಂಚಿ ಅವರು ಹಾರ್ಮೋನಿಯಂ ಮತ್ತು ಬಸವರಾಜ ಯಳಸಂಗಿ,ವಿನಾಯಕ ಕುಲಕರ್ಣಿ ಯಲಗೋಡ ಅವರು ತಬಲಾ ಸಾಥ್ ನೀಡಿದರು.ಗಂವ್ಹಾರ ಮಠದ ಸದ್ಗುರು ಸೋಪಾನನಾಥ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಸದ್ಗುರು ಶಾಂತಾನಂದ ಸ್ವಾಮಿಗಳ ಮಠದ ಪೀಠಾಧಿಪತಿ ವೇ.ಮೂ ಪ್ರಶಾಂತ ಮಹಾಸ್ವಾಮಿಗಳು ಮತ್ತು ವಿವಿಧ ಮಠಾಧೀಶರು , ಗಣ್ಯರು,ಭಕ್ತರು ಉಪಸ್ಥಿತರಿದ್ದರು.