ಗೋರ್ಟಾ ಗ್ರಾಮಕ್ಕೆ ಸರ್ದಾರ ವಲ್ಲಭಭಾಯಿ ಪಟೇಲ್ ಮೂರ್ತಿ

ಬೀದರ,ಮಾ 13 ಗೋರ್ಟಾ (ಬಿ) ಗ್ರಾಮದಲ್ಲಿ ನಿಜಾಮರ ಆಳ್ವಿಕೆ ಸಂದÀರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ನಿಜಾಮರ ವಿರುದ್ಧ ಹೋರಾಡಿ, ಹುತಾತ್ಮರಾಗಿದ್ದಹೋರಾಟಗಾರರ ನೆನಪಿಗಾಗಿ ಹುತಾತ್ಮರ ಸ್ಮಾರಕ ನಿರ್ಮಾಣ ಹಾಗೂಉಕ್ಕಿನ ಮನುಷ್ಯ ಸರ್ದಾರ ವಲ್ಲಭಭಾಯಿ ಪಟೇಲ್‍ರ ಮೂರ್ತಿಪ್ರತಿಷ್ಠಾಪನೆ ಮಾಡಲು ಈಗಾಗಲೆ ಎಲ್ಲಾ ಸಿದ್ದತೆಗಳು
ನಡೆಯುತ್ತಿವೆ.
ಅದರ ಮುಂದುವರೆದ ಭಾಗವಾಗಿ ಉಕ್ಕಿನ ಮನುಷ್ಯ ಸರದಾರ
ವಲ್ಲಭಭಾಯಿ ಪಟೇಲ್‍ರ 10.5 ಅಡಿ ಎತ್ತರದ ಪ್ರತಿಮೆಯೂ
ಸಿದ್ದಗೊಂಡು, ಮಹಾರಾಷ್ಟ್ರದ ಕೋಲ್ಹಾಪೂರದಿಂದ ಗೋರ್ಟಾ (ಬಿ)
ಗ್ರಾಮಕ್ಕೆ ಆಗಮಿಸುತ್ತಿದೆ. ಪ್ರತಿಮೆಯನ್ನು ಕೇಂದ್ರ
ರಸಾಯನಿಕ ಹಾಗೂ ರಸಗೊಬ್ಬರ ಖಾತೆ ಮತ್ತು ನೂತನ ಹಾಗೂ
ನವೀಕರಿಸಬಹುದಾದ ಇಂಧನ ಮೂಲ ಖಾತೆ ರಾಜ್ಯ ಸಚಿವ
ಭಗವಂತ ಖೂಬಾರವರು ಕಲಬುರಗಿ ಜಿಲ್ಲೆಯ ಕಮಲಾಪೂರದಲ್ಲಿ
ಸ್ವಾಗತಿಸಿಕೊಂಡರು .ಮತ್ತು ಪಕ್ಷದ ಎಲ್ಲಾ ಮುಖಂಡರುಗಳ
ಸಮ್ಮುಖದಲ್ಲಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ
ಸಲ್ಲಿಸಿದರು. ಪ್ರತಿಮೆಯನ್ನು ಹಳ್ಳಿಖೇಡ (ಕೆ)
ಗ್ರಾಮದಲ್ಲಿ ಸಾರ್ವಜನಿಕರು ಹಾಗೂ ಕಾರ್ಯಕರ್ತರು ಸರ್ಧಾರ
ವಲ್ಲಭಭಾಯಿ ಪಟೇಲ್‍ರ ಮೂರ್ತಿಗೆ ಸ್ವಾಗತಿಸಿಕೊಂಡು,
ಬಸವಕಲ್ಯಾಣಕ್ಕೆ ಕಳುಹಿಸಿಕೊಟ್ಟರು. ಈ ಸಂದರ್ಭದಲ್ಲಿ ಕಲಬುರಗಿ ಗ್ರಾಮೀಣ ಶಾಸಕರು, ಮಾಜಿಶಾಸಕರಾದ ಸುಭಾಷ ಕಲ್ಲೂರ, ಜಿಲ್ಲಾಧ್ಯಕ್ಷ
ಶಿವಾನಂದ ಮಂಠಾಳಕರ್, ಕಲಬುರಗಿ ವಿಭಾಗದ ಸಹ ಪ್ರಭಾರಿ
ಈಶ್ವರಸಿಂಗ್ ಠಾಕೂರ್, ಬುಡಾ ಅಧ್ಯಕ್ಷ ಬಾಬುವಾಲಿ,
ಮುಖಂಡರಾದ ಪ್ರಕಾಶ ಟೊಣ್ಣೆ, ಗುರುನಾಥ ಕೊಳ್ಳುರ,
ಮಲ್ಲಿಕಾರ್ಜುನ ಕುಂಬಾರ, ಸಿದ್ದು ಪಾಟೀಲ್, ಸೋಮನಾಥ ಪಾಟೀಲ್,
ವಿಜಯಕುಮಾರ ಪಾಟೀಲ್ ಗಾದಗಿ, ಮಹೇಶ್ವರ ಸ್ವಾಮಿ
ಉಪಸ್ಥಿತರಿದ್ದರು.