ಗೋರೆಬಾಳ ವಸತಿ ಶಾಲೆ ವೈದ್ಯಾಧಿಕಾರಿ ಭೇಟಿ

ಸಿಂಧನೂರು ಮಾ.೩೧- ಡಾ ಬಿ.ಆರ್.ಅಂಬೇಡ್ಕರ್ ವಸತಿ ನಿಲಯಕ್ಕೆ ತಾಲೂಕಾ ವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿ ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆ ಮಾಡಿದೆ .
ತಾಲೂಕಿನ ಗೋರೆಬಾಳ ಗ್ರಾಮದಲ್ಲಿರುವ ಡಾ ಬಿ.ಆರ್.ಅಂಬೇಡ್ಕರ್ ವಸತಿ ನಿಲಯದಲ್ಲಿ ಹಲವು ದಿನಗಳಿಂದ ಹಲವಾರು ವಿಧ್ಯಾರ್ಥಿಗಳು ಕೆಮ್ಮು, ನೆಗಡಿ, ಜ್ವರ ದಿಂದ ಬಳಲುತ್ತಿದ್ದ ಬಗ್ಗೆ ಪತ್ರಿಕೆಯಲ್ಲಿ ವರದಿ ಮಾಡಿದ್ದನ್ನು ಸ್ಮರಿಸಬಹುದು.
ಪತ್ರಿಕೆ ವರದಿಗೆ ಸ್ಪಂದಿಸಿದ ತಾಲುಕ ವೈದ್ಯಾಧಿಕಾರಿ ಡಾ.ನಂದಕುಮಾರ, ಡಾ.ಜೀವನೇಶ್ವರಯ್ಯ ,ಹಿರಿಯ ಆರೋಗ್ಯ ಸಹಾಯಕ ಸಂಗನಗೌಡ, ಪ್ರಯೋಗಾಲಯದ ಸಿಬ್ಬಂದಿ ತಿಪ್ಪೆರುದ್ರಯ್ಯ, ಆಶಾ ಕಾರ್ಯಾಕರ್ತೆಯರ ನೇತೃತ್ವದ ತಂಡ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ನಿಲಯದಲ್ಲಿ ಹಲವು ಮಕ್ಕಳು ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಾ ಮಲಗಿದ್ದನ್ನು ಕಂಡು ಮುಂದೆನಾದರೂ ಹೆಚ್ಚು ಕಡಿಮೆ ಯಾದರೆ ಯಾರು ಹೊಣೆ ನಮ್ಮ ಗಮನಕ್ಕೆ ಯಾಕೆ ತಂದಿಲ್ಲ ಎಂದು ಶಿಕ್ಷಕರನ್ನು ವೈದ್ಯಾಧಿಕಾರಿಗಳ ತಂಡ ತರಾಟೆಗೆ ತೆಗೆದುಕೊಂಡಿದೆಂದು ತಿಳಿದುಬಂದಿದೆ.
ವಸತಿನಿಲಯದಲ್ಲಿ ಕೆಮ್ಮು, ನೆಗಡಿ ,ಜ್ವರ ಕಾಣಿಸಿಕೊಂಡ ಮಕ್ಕಳನ್ನು ಪಾಲಕರ ಜೊತೆ ಅವರ ಮನೆಗೆ ಕಳುಹಿಸಲಾಗಿದ್ದು ಮನೆಗೆ ಹೋದ ಮಕ್ಕಳಿಗೂ ಸಹ ಕೋವಿಡ್ -೧೯ ಪರೀಕ್ಷೆ ಮಾಡಿಸಿಕೊಳ್ಳಲು ಪಾಲಕರಿಗೆ ಸೂಚನೆ ನೀಡುವಂತೆ ಶಿಕ್ಷಕರಿಗೆ ವೈದ್ಯಾಧಿಕಾರಿಗಳ ತಂಡ ಸೂಚನೆ ನೀಡಿದರೆನ್ನಲಾಗಿದೆ.