ಗೋರಕ್ಷಾ ಪರಿಷತ್ ನಿಂದ ಗೋಪೂಜೆ

ಹೊನ್ನಾಳಿ.ನ.6;  ಹಿಂದೂಗಳ ಜೀವನ ಪದ್ದತಿಯಲ್ಲಿ ಗೋವುಗಳು ಧಾರ್ಮಿಕವಾಗಿ ಮಹತ್ತರ ಪಾತ್ರ ವಹಿಸುತ್ತಿವೆ,ಇಂದಿಗೂ ಪ್ರತಿ ಮನೆ ಹಾಗೂ ಮನಗಳಲ್ಲಿ ಗೋಪೂಜೆ ಹಾಗೂ ಗೋಸತ್ಕಾರಗಳು ನಡೆಯುತ್ತಿವೆ ಎಂದು ಗೋರಕ್ಷಾ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಉಮಕಾಂತ್ ಜೋಯ್ಸ್ ಹೇಳಿದರು.ಪಟ್ಟಣದ ಕೋಟೆ ಶಂಕರಮಠದಲ್ಲಿ ತಾಲೂಕು ಗೋರಕ್ಷಾ ಪರಿಷತ್ ವತಿಯಿಂದ ನಡೆದ ಗೋಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಸನಾತನ ಧಾರ್ಮಿಕ ಪರಂಪರೆಯಲ್ಲಿ ಹಿಂದಿನ ಋಷಿ-ಮುನಿಗಳು, ಸಂತರು, ಶರಣರು, ದಾರ್ಶನಿಕರು ಗೋಮಾತೆಗೆ ವಿಶೇಷ ಆದ್ಯತೆ ನೀಡಿದ್ದಾರೆ,ಅಲ್ಲದೆ ಗೋವಿನಲ್ಲೇ ಎಲ್ಲಾ ದೇವಾನು ದೇವತೆಗಳನ್ನು ಕಂಡ ದೇಶ ನಮ್ಮದು ಎಂದರು. ಗೋವುಗಳನ್ನು ದೈವ ಸ್ವರೂಪವೆಂದು ತಿಳಿದು ಆರಾಧನೆಗೈಯುತ್ತಿದ್ದೇವೆ, ಅಂದಿನಿಂದ ಇಂದಿನವರೆಗೂ ನಮ್ಮ ಸಂಸ್ಕೃತಿಯಲ್ಲಿ ಗೋಮಾತೆಗೆ ವಿಶೇಷ ಸ್ಥಾನಮಾನ ಕೊಟ್ಟು ಗೋಮಾತೆಯನ್ನು ತಾಯಿಯ ಸ್ವರೂಪದಲ್ಲಿ ನಾವುಗಳೂ ಆರಾಧಿಸುತ್ತಿದ್ದೇವೆ ಎಂದು ತಿಳಿಸಿದರು.ನಮ್ಮ ಅವಳಿ ತಾಲೂಕಿನಲ್ಲಿ ನಡೆಯುವ ಸಂತೆಗಳಲ್ಲಿ ಗೋವುಗಳನ್ನು ಖರಿಧಿಸಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿರುವ ಬಗ್ಗೆ ಮಾಹಿತಿಗಳಿವೆ,ಪೊಲೀಸರು ಈ ಬಗ್ಗೆ ನಿರ್ದಾಕ್ಷಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಲ್ಲಿ ಮನವಿ ಮಾಡಿದರುಪುರಸಭಾಧ್ಯಕ್ಷ ಬಾಬು ಹೋಬಳದಾರ್ ಮಾತನಾಡಿ.ಗೋಮಾತೆ ನಮ್ಮ ಕುಟುಂಬದ ಒಬ್ಬ ಸದಸ್ಯನಿದ್ದಂತೆ,ಗೋವು ಯಾರ ಮನೆಯಲ್ಲಿ ಸಾಕಿದ್ದಾರೋ ಅಂತಹ ಮನೆಗಳಲ್ಲಿ ಮಕ್ಕಳು ಗೋವುಗಳ ಬಳಿ ಆಟ ಆಡುತ್ತ ಇರುತ್ತಾರೆ,ಅಷ್ಟು ಸಲಿಗೆಯಿಂದ ಇರುವ ದೈವ ಸ್ವರೂಪ ಗೋವು ನಮ್ಮ ಜೀವನಾಡಿ ಕೂಡ ಎಂದರು.ಗೋಮಾತೆ ನಮಗೆ ಎಲ್ಲಾವನ್ನು ನೀಡುವ ಕಾಮದೇನು, ಆರೋಗ್ಯಕ್ಕೆ ಹಾಲು, ಕೃಷಿಗೆ ಗೊಬ್ಬರ, ದುಡಿಮೆ ಹೀಗೆ ಪ್ರತಿಯೊಂದನ್ನು ಗೋವುಗಳು ನೀಡುತ್ತವೆ ಆದ್ದರಿಂದ ಕೇವಲ ಧಾರ್ಮಿಕ ದೃಷ್ಟಿಯಿಂದ ಗೋವುಗಳ ಸಂರಕ್ಷಣೆಯಾಗಬೇಕು ಎಂಬ ಅರ್ಥವಲ್ಲ ಬದಲಾಗಿ ಮಾನವೀಯತೆ ದೃಷ್ಠಿಯಿಂದ ನೋಡಬೇಕಾದುದ್ದು ನಮ್ಮೆಲ್ಲರ ಕರ್ತವ್ಯ ಎಂದರು.ಬಿಜೆಪಿ ಅಸಂಘಟಿತ ಪ್ರಕೋಷ್ಟ ಸಂಚಾಲಕ ಎ.ಬಿ.ಹನುಮಂತಪ್ಪ,ಶಾಸಕ ಸಹೋದರ ಎಂ.ಪಿ.ರಾಜು,ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್,ಪುರಸಭಾ ಮಾಜಿ ಅಧ್ಯಕ್ಷ ಕೆ.ವಿ,ಶ್ರೀಧರ್,ಅರುಣ್‌ಕುಮಾರ್,ಶ್ರೀನಿವಾಸ್,ಮನೋಹರ್ ಜೋಯ್ಸ್,ಮಹೇಶ್ ಹುಡೇದ್,ಮಂಜುನಾಥ್ ಇಂಚರ ಎಂದರು.