ಗೋಮಾಂಸ ಮಾರಾಟ ಸ್ಥಳಾಂತರಕ್ಕೆ ಶ್ರೀರಾಮ ಸೇನೆ ಆಗ್ರಹ

ಕಾಳಗಿ. ಡಿ.7 : ಪಟ್ಟಣ ಗೋಮಾಂಸ ಮಾರಾಟ ಅಂಗಡಿಗಳನ್ನು ಸ್ಥಳಾಂತರಗೊಳಿಸಬೇಕೆಂದು ತಾಲೂಕು ಶ್ರೀರಾಮಸೇನೆ ವತಿಯಿಂದ ತಹಶೀಲ್ದಾರರಿಗೆ ಮನಿವಿ ಪತ್ರ ಸಲ್ಲಿಸಲಾಯಿತು.

ಪಟ್ಟಣದ ಮರಗಮ್ಮ ದೇವಸ್ಥಾನದ ಹತ್ತಿರ ಹಲವು ವರ್ಷಗಳಿಂದ ಗೋಮಾಂಸ ಮಾರಾಟ ಮಾಡುತ್ತಿದ್ದು. ಕಾಳಗಿ ಪುರಸಭೆಯಿಂದ ಯಾವುದೇ ಅನುಮತಿ ಅಂಗಡಿ ಪರವನಿಗೆ ಇಲ್ಲದೆ ಯಾರದೆ ಭಯವಿಲ್ಲದೆ ಗೋಮಾಂಸ ಮಾರಾಟ ಮಾಡುತ್ತಿದ್ದು. ಇದರಿಂದ ಸಾರ್ವಜನಿಕವಾಗಿ ಮತ್ತು ಸುತ್ತಮುತ್ತಿನ ವ್ಯಾಪಾರಿಗಳಿಗೂ ಬಹಳ ತೊಂದರೆಯಾಗುತ್ತಿದ್ದು. ಯಾವುದೇ ಶುಭ ಸಮಾರಂಭ ಕಾರ್ಯಕ್ರಮಗಳಿಗೆದಕ್ಕೆ ಉಂಟಾಗುತ್ತಿದ್ದು. ಆದ್ದರಿಂದ ಗೋಮಾಂಸ ಅಂಗಡಿಗಳನ್ನು ಪ್ರಸಕ್ತ ಸ್ಥಳದಿಂದ ಸ್ಥಳಾಂತರ ಮಾಡಬೇಕು ಎಂದು ಕಾಳಗಿ ತಾಲೂಕ ಶ್ರೀರಾಮ ಸೇನೆ ಆಗ್ರಹಿಸಲಾಯಿತು.

ಈ ವೇಳೆಯಲ್ಲಿ ತಾಲೂಕು ಶ್ರೀರಾಮ ಸೇನೆ ಅಧ್ಯಕ್ಷ ಜಗದೀಶ ಮಾಲಿಪಾಟೀಲ, ಉಪಾಧ್ಯಕ್ಷರಾದ ಸಿದ್ದಯ್ಯ ಬಂಕಲಗಿ,ಸಂಗಮೇಶ ಬಡಿಗೇರ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ್ ಬೈರಪ್ಪ, ಕಾರ್ಯದರ್ಶಿ ಬೀರಲಿಂಗ ಪೂಜಾರಿ, ರಾಜು ಸಿಳ್ಳಿನ , ಆಕಾಶ ಗೋಟೂರ, ರಾಕೇಶ ಸುಲೇಪೇಟ, ರಾಜು ದಂಡೋತಿ, ರಾಹುಲ ಚಿತ್ತಾಪುರ, ಅಭಿಲಾಶ ಮೋಟಗಿ, ಮಹೇಶ ಟೆಂಗಳಿ ಸೇರಿದಂತೆ ಅನೇಕರಿದ್ದರು.