ಗೋಮಾಂಸ ಚೆಲ್ಲಿದ ಬೈಕ್ ಗೆ ಬೆಂಕಿ

ಬೆಂಗಳೂರು, ಸೆ.17- ಆಯತಪ್ಪಿ ಬೈಕ್ ಸವಾರ ಕೆಳಗೆ ಬಿದ್ದಾಗ ಅದರಿಂದ ಚೆಲ್ಲಿದ ಗೋಮಾಂಸ ಕಂಡ ಸ್ಥಳೀಯರು ಬೈಕ್​ಗೆ ಬೆಂಕಿ ಇಟ್ಟು ಸವಾರನನ್ನು ಪೊಲೀಸರ ವಶಕ್ಕೆ ನೀಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯಲ್ಲಿ ಕಳೆದ ರಾತ್ರಿ ಘಟನೆ ನಡೆದಿದೆ.
ಹಿಂದೂಪುರದಿಂದ ಬೆಂಗಳೂರಿಗೆ ಹೋಗುತ್ತಿದ್ದ ಬೈಕ್ ಸವಾರ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಬೈಕ್​ನಲ್ಲಿ ಸಾಗಿಸುತ್ತಿದ್ದ ಗೋಮಾಂಸ ಸಹ ರಸ್ತೆಯಲ್ಲಿ ಚೆಲ್ಲಿದೆ, ಗೋಮಾಂಸ ಸಾಗಟ ಮಾಡುತ್ತಿದ್ದರಿಂದ ಅಕ್ರೋಶಗೊಂಡ ಸ್ಥಳೀಯರು ಬೈಕ್​ಗೆ ಬೆಂಕಿ ಇಟ್ಟಿದ್ದಾರೆ.
ನಂತರ ಬೈಕ್​ ಸವಾರನನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.