ಗೋಬ್ಯಾಕ್ ಸೋಮಣ್ಣ-ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

ಚಾಮರಾಜನಗರ, ಮಾ.23:- ಚಾಮರಾಜನಗರ ಜಿಲ್ಲೆಯ ಚುನಾವಣಾ ಉಸ್ತುವಾರಿಯನ್ನು ಸಚಿವ ಸೋಮಣ್ಣಗೆ ಕೊಟ್ಟಿರುವುದಕ್ಕೇ ಜಿಲ್ಲಾ ಬಿಜೆಪಿ ಮುಖಂಡರೇ ವಿರೋಧ ವ್ಯಕ್ತಪಡಿಸಿದ್ದಾರೆ.
ಇಂದು ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಚಾಮರಾಜನಗರ ಜಿಲ್ಲಾ ಬಿಜೆಪಿ ಘಟಕದ ವಕ್ತಾರ ಅಯ್ಯನಪುರ ಶಿವಕುಮಾರ್ ಹಾಗೂ ಇನ್ನಿತರ ಬಿಜೆಪಿ ಮುಖಂಡರು ಸೋಮಣ್ಣರವರಿಗೆ ಜಿಲ್ಲಾ ಚುನಾವಣಾ ಉಸ್ತುವಾರಿ ಹಾಗೂ ಚಾಮರಾಜನಗರ ವಿಧಾನಸಭಾಟಿಕೆಟ್ ನೀಡಬಾರದೆಂದು ಆಗ್ರಹಿಸಿದರು.
ಗೋ ಬ್ಯಾಕ್ ಸೋಮಣ್ಣ ಗೋ ಬ್ಯಾಕ್:
ಸಚಿವ ಸೋಮಣ್ಣಗೆ ಚಾಮರಾಜನಗರ ಜಿಲ್ಲೆಯಿಂದ ಟಿಕೆಟ್ ಏನಾದರೂಕೊಟ್ಟರೇ “ಗೋ ಬ್ಯಾಕ್ ಸೋಮಣ್ಣ ಗೋ ಬ್ಯಾಕ್” ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಜೊತೆಗೆ ಚುನಾವಣಾ ಉಸ್ತುವಾರಿಯನ್ನೂ ನೀಡಬಾರದು ಎಂದು ಒತ್ತಾಯಿಸಿರುವುದು ಬಿಜೆಪಿ ಪಾಳೇಯದಲ್ಲಿ ಮತ್ತೇ ಭಿನ್ನಮತ ಸ್ಪೋಟವಾಗಿದೆ.
ಸಚಿವ ಸೋಮಣ್ಣ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಆದ ಬಳಿಕ ಪಕ್ಷದ ಸಂಘಟನೆಯಲ್ಲಿ ತೊಡಗಿಲ್ಲ, ಕಳೆದ ಲೋಕ ಚುನಾವಣೆಯಲ್ಲೂ ಕೆಲಸ ಮಾಡಿಲ್ಲ, 2018ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದರು, ಅವರಿಂದ ಪಕ್ಷಕ್ಕೆಯಾವುದೇ ಅನೂಕೂಲವಾಗಿಲ್ಲ ಇದನ್ನೆಲ್ಲ ಗಮನಿಸಿ ಚುನಾವಣಾ ಉಸ್ತುವಾರಿಕೊಡಬಾರದು ಎಂದು ಅವರು ಆಗ್ರಹಿಸಿದರು.
ಹನೂರು, ಚಾಮರಾಜನಗರ ಸೇರಿದಂತೆ ಕಾಂಗ್ರೆಸ್ ಶಾಸಕರನ್ನು ಹಾಡಿ ಹೊಗಳುತ್ತಾರೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಕಾರ್ಯಕ್ರಮ ಕ್ಕೈಗೈರಾಗಿ ಪಕ್ಷದ ಸಂಘಟನೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ, ಕಾಂಗ್ರೆಸ್ ಸೇರುತ್ತೇನೆಂದು ವರಿಷÀ್ಠರಿಗೆ ಬೆದರಿಕೆಒಡ್ಡುವತಂತ್ರವನ್ನು ಪ್ರಯೋಗಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಅಯ್ಯನಪುರ ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ, ಚಾಮರಾಜನಗರ ಚುನಾವಣಾ ಉಸ್ತುವಾರಿಯಾಗಿ ವಿಜಯೇಂದ್ರಅವರನ್ನು ನೇಮಿಸಬೇಕು, ಯಡಿಯೂರಪ್ಪ ಅವರು ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಪ್ರಚಾರ ನಡೆಸಬೇಕು, ಚಾಮರಾಜನಗರ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆಉತ್ತಮ ವಾತಾವರಣ ಇದೆ ಎಂದು ಬಿಎಸ್‍ವೈ ಹಾಗೂ ವಿಜಯೇಂದ್ರ ಪರ ಬ್ಯಾಟ್ ಬೀಸಿದ್ದಾರೆ.
ಒಟ್ಟಿನಲ್ಲಿ ಇನ್ನೂ ಕೂಡ ಬಿಜೆಪಿಯಲ್ಲಿ ಬಿಎಸ್‍ವೈ ವರ್ಸಸ್ ವಿ.ಸೋಮಣ್ಣ ಪರಿಸ್ಥಿತಿ ಇದೆಎಂಬುದಕ್ಕೆ ಇಂದಿನ ಸುದ್ದಿಗೋಷ್ಠಿ ಸಾಕ್ಷೀಕರಿಸಿದೆ. ಜೊತೆಗೆ, ಭಾರತೀಯ ಜನತಾ ಪಕ್ಷದ ಲೆಟರ್ ಹೆಡ್‍ನಲ್ಲೇ ಸುದ್ದಿಗೋಷ್ಠಿಗೆ ಆಹ್ವಾನಿಸಿದ್ದು ಬಿಜೆಪಿಯಲ್ಲಿಎಲ್ಲವೂ ಸರಿಯಿಲ್ಲ ಎಂದು ತೋರಿಸಿದೆ.
ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರುಗಳಾದ ಅಯ್ಯನಪುರ ವಿಜಯೇಂದ್ರ, ಬಿಜೆಪಿ ಶಕ್ಷಿಕೇಂದ್ರದ ಪ್ರಮುಖರಾದ ಕುಮಾರ್ ಭೋಗಾಪುರ ಇನ್ನಿತರರು ಹಾಜರಿದ್ದರು.