ಬೇಕಾಗುವ ಪದಾರ್ಥಗಳು:
- ಬಿಡಿಸಿದ ಗೋಬಿ – ೨ ಲೋಟ
- ಎಣ್ಣೆ – ೨ ಚಮಚ
- ಅರಿಶಿನ – ಅರ್ಧ ಚಮಚ
- ಅಚ್ಚಖಾರದಪುಡಿ – ರುಚಿಗೆ ತಕ್ಕಷ್ಟು
- ಧನಿಯಾಪುಡಿ – ರುಚಿಗೆ ತಕ್ಕಷ್ಟು
- ಕರಿಬೇವು – ಸ್ವಲ್ಪ
- ಸೀಳಿದ ಹಸಿಮೆಣಸಿನಕಾಯಿ ಘಮಕ್ಕೆ – ೨
- ಉಪ್ಪು – ರುಚಿಗೆ ತಕ್ಕಷ್ಟು
- ನಿಂಬೆರಸ – ರುಚಿಗೆ ತಕ್ಕಷ್ಟು
ವಿಧಾನ:
ಎಣ್ಣೆಗೆ ಬಿಡಿಸಿದ ಗೋಬಿ ಹೂಗಳು ಮತ್ತು ಸ್ವಲ್ಪ ನೀರು ಚಿಮುಕಿಸಿ ಬೇಯಿಸಿ, ಮೇಲೆ ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ತಟ್ಟೆಮುಚ್ಚಿ, ೨ ನಿಮಿಷ ಇಟ್ಟು ನಂತರ ಇಳಿಸಬೇಕು.