ಗೋಪೂಜೆ ಪವಿತ್ರ ಕಾರ್ಯ

ಹಟ್ಟಿಚಿನ್ನದಗಣಿ.ಡಿ.೨೨-ಗಣಿ ಅನುದಾನವನ್ನು ಸ್ಥಳಿಯವಾಗಿ ಬಳಸಲು ಕ್ರಮಕೈಗೊಳ್ಳಲಾಗುವುದು, ನೇಮಕಾತಿಯಲ್ಲಿ ಸ್ಥಳೀಯರಿಗೆ ಪ್ರಾಶಸ್ತ್ಯ ನೀಡಲಾಗುವುದು, ಸಂಸ್ಕಾರಯುತ ಜೀವನ ಸಮಾಜಕ್ಕೆ ಮಾದರಿಯೆಂದು ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ಡಿ.ವಜ್ಜಲ್ ಹೇಳಿದರು. ಪಟ್ಟಣದ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ವಿಪ್ರಸಮುದಾಯ ಏರ್ಪಡಿಸಿದ್ದ ಗೋಪೂಜೆ, ನೂತನ ಅಧ್ಯಕ್ಷ, ನಿರ್ದೇಶಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗೋ-ಪೂಜೆಯನ್ನು ಪತ್ನಿ ಅಮರಮ್ಮ ಹಾಗೂ ನಿರ್ದೇಶಕ ಶ್ರೀನಿವಾಸರಾಜ್ ದೇಸಾಯಿವರೊಂದಿಗೆ ನೆರವೇರಿಸಿ, ಸನ್ಮಾನ ಸ್ವೀಕರಿಸಿ ಸೋಮವಾರ ರಾತ್ರಿ ಮಾತನಾಡಿದರು.
ಗೋವು ಮಾತೃ ಸ್ವರೂಪಿ, ಅನೇಕ ದೇವತೆಗಳನ್ನು ಅವತಾರವಾಗಿದ್ದು, ರಾಜ್ಯ ಬಿಜೆಪಿ ಸರ್ಕಾರ ಜಾರಿಗೆ ತಂದ ಗೋಹತ್ಯೆ ನಿಷೇಧ ಐತಿಹಾಸಿಕ ನಿರ್ಧಾರವಾಗಿದೆ ಎಂದರು. ಗಣಿ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಕ್ರಮಕೈಗೊಳ್ಳುತ್ತೇವೆ. ೧೦ ವರ್ಷ ಕ್ಷೇತ್ರದ ಶಾಸಕನಾಗಿದ್ದ ನನ್ನನ್ನು ಗಣಿ ಅಧ್ಯಕ್ಷ ಮಾಡಿರುವುದು ಸ್ಥಳಿಯ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗಿದೆಯೆಂದರು.
ಗಣಿ ಅಧಿಕಾರಿ ವಿಶ್ವನಾಥ, ಬ್ರಾಹ್ಮಣ ಸಮುದಾಯ ಮುಖಂಡರಾದ ಡಾ.ಎಲ್.ಪಿ ಕುಲಕರ್ಣಿ, ವೆಂಕಟೇಶನಾಡಪುರೋಹಿತ, ಬಲಭೀಮರಾವ್ ಕುಲಕರ್ಣಿ, ಗುರುರಾಜ ಕುಲಕರ್ಣಿ, ಶ್ರೀಕಾಂತ ಕುಲಕರ್ಣಿ, ಮುರಲಿಧರಾಚಾರ್, ವಿನಾಯಕ ಪ್ರಸಾದ, ಪ್ರವೀಣ್ ಜೋಷಿ, ಗೋಪಾಲರಾವ್, ಶ್ರೀನಿವಾಸ ಕುಲಕರ್ಣಿ ದೊಂಡಂಬಳಿ ಇದ್ದರು.
ಫೋಟೊ೨೨ಹಟ್ಟಿಚಿನ್ನದಗಣಿ೨:ಬ್ರಾಹ್ಮಣ ಸಮುದಾಯ ಏರ್ಪಡಿಸಿದ್ದ ಗೋ-ಪೂಜೆ ನೆರವೇರಿಸಿ ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ಡಿ. ವಜ್ಜಲ್ ಮಾತನಾಡಿದರು. ವಜ್ಜಲರ ಪತ್ನಿ ಅಮರಮ್ಮ, ನಿರ್ದೇಶಕ ಶ್ರೀನಿವಾಸರಾಜ್ ದೇಸಾಯಿ ಮಲದಕಲ್, ಎಲ್.ಪಿ ಕುಲಕರ್ಣಿ ಇದ್ದರು.
ಫೋಟೊ೨೨ಹಟ್ಟಿಚಿನ್ನದಗಣಿ೩:ಪಟ್ಟಣದ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ವಿಪ್ರಸಮುದಾಯ ಏರ್ಪಡಿಸಿದ್ದ ಗೋ-ಪೂಜೆಯನ್ನು ಪತ್ನಿ ಅಮರಮ್ಮ ಹಾಗೂ ನಿರ್ದೇಶಕ ಶ್ರೀನಿವಾಸರಾಜ್ ದೇಸಾಯಿವರೊಂದಿಗೆ ಕಂಪನಿ ಅಧ್ಯಕ್ಷ ಮಾನಪ್ಪ.ಡಿ ವಜ್ಜಲ್ ನೆರವೇರಿಸಿದರು.