ಗೋಪಾಲಗೌಡರಿಗೆ ರೈತ ಪ್ರಶಸ್ತಿ

ಹಾವೇರಿ:ಜ.7- ರಟ್ಟಿಹಳ್ಳಿ ತಾಲೂಕು ಮಾವಿನತೋಪ ಗ್ರಾಮದ ಗೋಪಾಲಗೌಡ ಮಲ್ಲಿಕಾರ್ಜುನಗೌಡ ಬಸನಗೌಡರ ಅವರಿಗೆ ಪ್ರಸಕ್ತ ಸಾಲಿನ ಶ್ರೇಷ್ಠ ತೋಟಗಾರಿಕಾ ರೈತ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಸಮಗ್ರ ಕೃಷಿ ಪದ್ಧತಿ ಹಾಗೂ ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಹೆಚ್ಚಿನ ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದ್ದು, ತೋಟಗಾರಿಕೆಯಲ್ಲಿ ವಿಶೇಷ ಸಾಧನೆಗೈದ ಕಾರಣ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಜನವರಿ 3 ರಂದು ನಡೆದ ಸಮಾರಂಭದಲ್ಲಿ ರೈತ ಗೋಪಾಲಗೌಡ ಮಲ್ಲಿಕಾರ್ಜುನಗೌಡ ಬಸನಗೌಡರ ಅವರನ್ನು ಸನ್ಮಾನಿಸಿ ಐದು ಸಾವಿರ ನಗದು ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗಿದೆ ಎಂದು ದೇವಿಹೊಸೂರ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.