
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಏ,1- ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡದಿದ್ದಾಗ ನಾವು ಬಿಜೆಪಿಯವರು ಕರೆದುಕೊಂಡು ಬಂದು ಕೂಡ್ಲಿಗಿಯಲ್ಲಿ ನಿಲ್ಲಿಸಿ ಗೆಲಿಸಿದೆವು. ಆದ್ರೆ ಎನ್.ವೈ. ಗೋಪಾಲಕೃಷ್ಣ ಅವರು ಈಗ ರಾಜೀನಾಮೆ ನೀಡಿರುವುದು ಬೇಸರ ತರಿಸಿದೆ. ಕೂಡ್ಲಿಗಿ ಬಿಜೆಪಿ ಕಾರ್ಯಕರ್ತರಿಗೆ ತುಂಬಾ ನೋವಾಗಿದೆಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ಅವರಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು. ಯಾವ ಕಾರಣಕ್ಕೆ ಪಕ್ಷ ಬಿಟ್ಟರು ಎಂಬುದನ್ನು ಅವರು ಹೇಳಿಲ್ಲ ಒಟ್ಟಾರೆ ಅವರ ನಡೆ ಕಾರ್ಯಕರ್ತರಿಗೆ ಪಕ್ಷ ಬೇಸರ ತರಿಸಿದೆಂದರು.
ರಾಜ್ಯಾದ್ಯಾಂತ ಸುತ್ತಡೋ ಶ್ರೀರಾಮುಲು ಇದೀಗ ಕ್ಷೇತ್ರ ಗಟ್ಟಿ ಮಾಡಿಕೊಳ್ಳಲು ಗ್ರಾಮೀಣ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದೀರಾ ಎಂಬ ಪ್ರಶ್ನೆಗೆ. ಇದನ್ನು ಅಲ್ಲಗಳೆಯುತ್ತ. ಇನ್ನೂ ಟಿಕೆಟ್ ಪೈನಲ್ ಆಗಿಲ್ಲ ಹೀಗಾಗಿ ವಿಜಯ ನಗರ ಬಳ್ಳಾರಿ ಓಡಾಡ್ತಿದ್ದೇನೆ. ಸ್ಟಾರ್ ಕ್ಯಾಂಪೇನ್ ಲಿಸ್ಟ್ ಬಂದ ಬಳಿಕ ರಾಜ್ಯಾದ್ಯಂತ ಸುತ್ತಾಡ್ತೇನೆ. ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ ಎಂದರು.
ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕೆ ಸ್ಪರ್ಧೆ ಮಾಡೋದಾಗಿ ಪಕ್ಷಕ್ಕೆ ತಿಳಿಸಿದ್ದೇನೆ. ಅದ್ರೇ ಅದೇ ಅಂತಿಮವಾಗಿಲ್ಲವೆಂದರು.
ಅಂಬೇಡ್ಕರ್ ನಗರದ ನಿವಾಸಿಗಳ ವಿಷಯದಲ್ಲಿ ಶಾಸಕ ನಾಗೇಂದ್ರ ತಮ್ಮ ವಿರುದ್ದ ಮಾಡಿರುವ ಆರೋಪಕ್ಕೆ. ಯಾರನ್ನು ನಾನು ಬೆದರಿಸಿಲ್ಲ. ಬಾಲೀಶದ ಹೇಳಿಕೆ ಕೊಡೋದು ಸರಿಯಲ್ಲ. ಬೆದರಿಕೆ ಹಾಕೋ ಸಂಸ್ಕೃತಿ ನಮ್ಮದಲ್ಲ ಎಂದು ನಾಗೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.