ಗೋಧಿ ಹಲ್ವಾಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು : ಒಂದು ಕಪ್
ತುಪ್ಪ : ಒಂದು ಕಪ್
ಸಕ್ಕರೆ: ಒಂದುಕಪ್
ಏಲಕ್ಕಿ ಪುಡಿ : ಅರ್ಧ ಚಮಚ
ಬಾದಾಮಿ ಮತ್ತು ಗೋಡಂಬಿ – ಸ್ವಲ್ಪ
ಮಾಡುವ ವಿಧಾನ:
ಒಂದು ಪ್ಯಾನ್‌ಗೆ ತುಪ್ಪವನ್ನು ಹಾಕಿ ಬಿಸಿಯಾದ ನಂತರ ಗೋಧಿ ಹಿಟ್ಟನ್ನು ಹಾಕಿ ಮಿಕ್ಸ್ ಮಾಡಿ. ಅದು ಸೀದು ಹೋಗಲು ಬಿಡದಂತೆ ಸಣ್ಣ ಉರಿಯಲ್ಲಿ ನಿರಂತರವಾಗಿ ಕೈಯಾಡಿಸುತ್ತಲೇ ಇರಿ. ಹಿಟ್ಟು ಕಂದು ಬಂಗಾರದ ಬಣ್ಣಕ್ಕೆ ಬರುವವರೆಗೆ ಕಾಯಬೇಕು. ಇದರೊಂದಿಗೆ ಇನ್ನೊಂದು ಪ್ಯಾನ್‌ನಲ್ಲಿ ಒಂದು ಕಪ್ ಸಕ್ಕರೆ ಮತ್ತು ಮೂರು ಕಪ್ ನೀರನ್ನು ಹಾಕಿ ಐದು ನಿಮಿಷ ಕುದಿಸಿ. ಹಿಟ್ಟು ಬಂಗಾರದ ಬಣ್ಣಕ್ಕೆ ಬಂದಾಗ ಹಿಟ್ಟಿನಲ್ಲಿ ನಿರಂತರವಾಗಿ ಕೈಯಾಡಿಸುತ್ತಾ ಈ ಪಾಕವನ್ನು ಅದಕ್ಕೆ ಸೇರಿಸುತ್ತಾ ಬರಬೇಕು. ನಿರಂತರವಾಗಿ ಕೈಯಾಡಿಸುತಲೇ ಇರಬೇಕು. ಹಿಟ್ಟು ಪಾಕವನ್ನು ಸಂಪೂರ್ಣವಾಗಿ ಹೀರಿ ದಪ್ಪವಾಗುತ್ತಾ ಬರುತ್ತದೆ. ಸುಮಾರು ಐದು ನಿಮಿಷಗಳವರೆಗೆ ಹೀಗೆಯೇ ಚಿಕ್ಕ ಉರಿಯಲ್ಲಿ ಬೇಯಿಸಬೇಕು. ನಂತರ ಆ ಮಿಶ್ರಣವು ತಳವನ್ನು ಬಿಡುತ್ತದೆ ಮತ್ತು ತುಪ್ಪವನ್ನು ಬಿಡಲು ಪ್ರಾರಂಭಿಸುತ್ತದೆ. ಆಗ ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಹುರಿದ ಗೋಡಂಬಿ ಹಾಗೂ ಬಾದಾಮಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಟೌ ಆಫ್ ಮಾಡಿದರೆ ರುಚಿಯಾದ ಗೋಧಿ ಹಲ್ವಾ ಸವಿಯಲು ಸಿದ್ಧವಾಗುತ್ತದೆ.