ಗೋಧಿ ಸಂಗ್ರಹ ಶೇ.೩೦ರಷ್ಟು ಏರಿಕೆ

ನವದೆಹಲಿ,ಏ.೨೬- ಪ್ರಸಕ್ತ ಮುಂಗಾರು ಹಂಗಾಮಿನ ಮಾರ್ಕೆಟಿಂಗ್ ಋತುವಿನಲ್ಲಿ ಗೋಧಿ ಸಂಗ್ರಹ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸುಮಾರು ಶೇ.೨೫ರಷ್ಟು ಹೆಚ್ಚಾಗಿದೆ.

ಸಂಗ್ರಹಣೆಯ ಪ್ರಸ್ತುತ ಪ್ರವೃತ್ತಿಯು ಚಳಿಗಾಲದ ಬೆಳೆಯ ಖರೀದಿ ಮೇಲೆ ಅವಲಂಬಿತವಾಗಿದೆ.
ಗೋಧಿ ಸಂಗ್ರಹಣೆ ವಾರಾಂತ್ಯದ ವೇಳೆಗೆ ಕಳ ಮತ್ತಷ್ಟು ಹೆಚ್ಚಾಗಹುದು ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ

ಸೋಮವಾರದ ವೇಳೆಗೆ ಗೋಧಿ ಸಂಗ್ರಹಣೆ ೧೭೧ ಲಕ್ಷ ಟನ್‌ಗೆ ತಲುಪಿದೆ ಮತ್ತು ಕಳೆದ ವರ್ಷ ಸರ್ಕಾರಿ ಘಟಕಗಳಲ್ಲಿ ೧೮೮ ಲಕ್ಷ ಟನ್‌ಗಳನ್ನು ಸಂಗ್ರಹಿಸಲಾಗಿತ್ತು ಎಂದು ಅಂಕಿ ಅಂಶಗಳು ಮಾಹಿತಿ ನೀಡಿವೆ.

ಪ್ರಸಕ್ತ ಮಾರುಕಟ್ಟೆ ವರ್ಷದ ಅಂತ್ಯದ ವೇಳೆಗೆ ಗೋಧಿ ಸಂಗ್ರಹಣೆ ಸುಮಾರು ೩೦೦ ಲಕ್ಷ ಟನ್‌ಗಳನ್ನು ಮುಟ್ಟುವ ವಿಶ್ವಾಸವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ,

ಆಹಾರ ಭದ್ರತೆ ಖಚಿತಪಡಿಸಿಕೊಳ್ಳಲು ಶಾಸನಬದ್ಧ ಅವಶ್ಯಕತೆ ಪೂರೈಸಲು ಮತ್ತು ಅಗತ್ಯವಿದ್ದಲ್ಲಿ ಮಾರುಕಟ್ಟೆಯ ಮಧ್ಯಸ್ಥಿಕೆಗಾಗಿ ಸ್ವಲ್ಪ ದಾಸ್ತಾನು ಇರಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಲಾಗಿದೆ.

ಈ ನಡುವೆ ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಸೇರಿದಂತೆ ರಾಜ್ಯಗಳಿಗೆ “ಪಂಚಾಯತ್” ಮೂಲಕ ಗೋಧಿ ಖರೀದಿಸಲು ಅವಕಾಶ ಮಾಡಿಕೊಟ್ಟಿದೆ ಮತ್ತು, ಸೊಸೈಟಿಗಳು ಮತ್ತು ಸಹಕಾರಿಗಳಿಗೆ ನೀಡುವ ಕಮಿಷನ್‌ನಂತೆಯೇ ಪ್ರತಿ ಕ್ವಿಂಟಲ್‌ಗೆ ೨೭ ರೂ. ರೈತರು ತಮ್ಮ ಉತ್ಪನ್ನಗಳನ್ನು ಗೊತ್ತುಪಡಿಸಿದ ಖರೀದಿ ಕೇಂದ್ರಗಳಿಗೆ ಸಾಗಿಸುವುದಕ್ಕಿಂತ ಹೆಚ್ಚಾಗಿ ತಮ್ಮ ಗ್ರಾಮಗಳ ಪಂಚಾಯತ್ ಕಚೇರಿಗೆ ಕೊಂಡೊಯ್ಯಲು ಸುಲಭವಾಗುವುದರಿಂದ ಇದು ಖರೀದಿಯನ್ನು ವೇಗಗೊಳಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ಕೆಲವು ರಾಜ್ಯ ಸರ್ಕಾರಗಳು ಪಂಚಾಯತ್‌ಗಳ ಸೇವೆಗಳನ್ನು ತೆಗೆದುಕೊಳ್ಳುವಂತೆ ಮತ್ತು ಸಂಗ್ರಹಣೆಯ ವೇಗವನ್ನು ಹೆಚ್ಚಿಸಲು ಕಮಿಷನ್ ಪಾವತಿಸಲು ಆಹಾರ ಸಚಿವಾಲಯಕ್ಕೆ ಸೂಚಿಸಿವೆ.

ಆಹಾರ ಸಚಿವಾಲಯ ರಾಜಸ್ಥಾನ ಸರ್ಕಾರಕ್ಕೆ ನಾನ್-ಡಿಸಿಪಿ ಮೋಡ್‌ನಲ್ಲಿ ಗೋಧಿ ಸಂಗ್ರಹಿಸಲು ಅನುಮತಿ ನೀಡಿದೆ, ಅಂದರೆ ಭಾರತೀಯ ಆಹಾರ ನಿಗಮ ನೇರವಾಗಿ ಅಥವಾ ರಾಜ್ಯ ಸರ್ಕಾರಿ ಏಜೆನ್ಸಿಗಳ ಮೂಲಕ ಖರೀದಿ ಕೇಂದ್ರಗಳಿಂದ ಗೋಧಿಯನ್ನು ಸಂಗ್ರಹಿಸುತ್ತದೆ. ರಾಜ್ಯದ ಏಜೆನ್ಸಿಗಳು ಸಂಗ್ರಹಿಸಿದ ಗೋಧಿಯನ್ನು ಶೇಖರಣೆಗಾಗಿ ಅಥವಾ ಸೇವಿಸುವ ರಾಜ್ಯಗಳಿಗೆ ಸಾಗಿಸಲು ಹಸ್ತಾಂತರಿಸುತ್ತವೆ.