ಗೋದಾಮಿನ ಮೇಲೆ ದಾಳಿ ೨೬೦ ಸಿಲಿಂಡರ್ ವಶ

ಕುಣಿಗಲ್, ಆ. ೨- ಆಟೋರಿಕ್ಷಾ ಕಿಟ್‌ಗಳಿಗೆ ರೀಫಿಲ್ಲಿಂಗ್ ಮಾಡಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗ್ಯಾಸ್ ಸಿಲಿಂಡರ್ ಗೋಡೌನ್ ಮೇಲೆ ಪೊಲೀಸರು ದಾಳಿ ನಡೆಸಿ ವಿವಿಧ ಕಂಪೆನಿಗಳಿಗೆ ಸೇರಿದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ೨೬೯ ಸಿಲಿಂಡರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ತಾಲ್ಲೂಕಿನ ಕಸಬಾ ಹೋಬಳಿ ಬೋರಲಿಂಗನಪಾಳ್ಯದ ಗ್ರಾಮದ ನೇರಳೆಮಾರಮ್ಮ ದೇವಸ್ಥಾನದ ಹಿಂಭಾಗದಲ್ಲಿ ಲೇಔಟ್ ಬಳಿಯ ತೆಂಗಿನ ತೋಟದ ಗೋಲ್ಡನ್ ಶೆಡ್ಡಿನಲ್ಲಿ ಅಕ್ರಮವಾಗಿ ವಿವಿಧ ಕಂಪೆನಿಯ ಸಿಲಿಂಡರ್‌ಗಳನ್ನು ಶೇಖರಿಸಿ ಇಟ್ಟಿದ್ದು ಬೋರಲಿಂಗನಪಾಳ್ಯದ ಕುಮಾರ ಎಂಬುವವರ ಆಟೋ ರಿಕ್ಷಾ ಕಿಟ್‌ಗಳಿಗೆ ರೀಫಿಲ್ ಮಾಡಲು ಮುಂದಾದಾಗ ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಇನ್‌ಪೆಕ್ಟರ್ ವಿ.ಎಂ. ಗುರುಪ್ರಸಾದ್ ನೇತೃತ್ವದಲ್ಲಿ ದಾಳಿ ನಡೆಸಿ ೨೬೯ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದು ಆರೋಪಿ ಕುಮಾರ್ ಶೆಡ್ಡಿಗೆ ಬೀಗ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ. ಗೋಡೌನ್‌ನಲ್ಲಿ ವಿವಿಧ ಕಂಪೆನಿಯ ಗ್ಯಾಸ್ ೧೬೯ ಖಾಲಿ ಸಿಲಿಂಡರ್ ಸೇರಿದಂತೆ ಈ ಸಾಮಗ್ರಿಗಳು ಬಳಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ದಾಳಿಯಲ್ಲಿ ಸಿಬ್ಬಂದಿಗಳಾದ ಎಎಸ್‌ಐ ಶ್ರೀಧರ್, ಆಹಾರ ಇಲಾಖೆಯ ಸಚಿನ್, ಪೊಲೀಸ್ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ನರೇಂದ್ರ, ಪುಟ್ಟರಾಜು, ಷಡಕ್ಷರಿ ಪಾಲ್ಗೊಂಡಿದ್ದರು.