ಅಥಣಿ : ಜು.30:ಪಟ್ಟಣದ ವ್ಯಾಪ್ತಿಯಲ್ಲಿ ಸತತವಾಗಿ ಸುರಿದ ಮಳೆಗೆ ಮನೆಯ ಗೋಡೆ ಕುಸಿದು ಸಾವನ್ನಪ್ಪಿದ ಪಟ್ಟಣದಲ್ಲಿರುವ ಯುವಕನ ಮನೆಗೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿ ಸರ್ಕಾರದ ಪರಿಹಾರ ಧನದ ಆದೇಶ ದೃಢೀಕರಣ ಪ್ರತಿ ವಿತರಿಸಿದರು,
ಪಟ್ಟಣದ ಹನುಮಾನ ಅಗಸಿ ಹತ್ತಿರ ಇರುವ ತಾಸೆ ಗಲ್ಲಿಯ ನಿವಾಸಿ ಮೃತ ದುರ್ದೈವಿ ಕಾಶಿನಾಥ ಸುತಾರನ, ತಂದೆಯಾದ ಅಪ್ಪಾಸಾಬ ಸುತಾರನಿಗೆ ಸರ್ಕಾರದ ಪ್ರಕೃತಿ ವಿಕೋಪ ನಿಧಿ ಅಡಿಯಲ್ಲಿ ಮಂಜೂರಾದ 5 ಲಕ್ಷ ರೂಗಳ ಪರಿಹಾರ ಧನದ ದೃಢೀಕರಣ ಪ್ರತಿ ವಿತರಿಸಿದ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರು ಮಾತನಾಡಿ ಮೃತನ ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಸಹಾಯ ಸೌಲಭ್ಯಗಳನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಹಾಗೂ ಸರ್ಕಾರದ ವಸತಿ ಯೋಜನೆಯಡಿ ಮನೆ ಮಂಜೂರು ಮಾಡುವುದಾಗಿ ಭರವಸೆ ನೀಡಿದರು,
ಈ ವೇಳೆ ತಹಶೀಲ್ದಾರ ಬಿ ಎಸ್ ಕಡಕಭಾವಿ, ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್ ಐ ಶಿವಶಂಕರ ಮುಕರಿ, ಕಂದಾಯ ನಿರೀಕ್ಷಕ ಎಸ್ ಬಿ ಮೆಣಸಂಗಿ, ಗ್ರಾಮ ಆಡಳಿತ ಅಧಿಕಾರಿ ಎಂ ಎಂ ಮಿರ್ಜಿ, ಪುರಸಭೆ ಸದಸ್ಯರಾದ ರಾಜು ಬುಲಬುಲೆ, ಸಂತೋಷ ಸಾವಡಕರ, ಪ್ರದೀಪ ನಂದಗಾಂವ, ನಿತೀನ್ ಗೊಂಗಡಿ, ವಿಜಯಸಿಂಗ್ ರಜಪೂತ, ಸೇರಿದಂತೆ ಹಲವರು ಉಪಸ್ಥಿತರಿದ್ದರು,