ಗೋಡೆ ಕುಸಿದು ಯುವಕ ಸಾವು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಚಿದಾನಂದ ಸವದಿ

ಅಥಣಿ : ಜು.27:ರಾತ್ರಿ ಇಡಿ ಪಟ್ಟಣದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹನುಮಾನ ದೇವರ ಅಗಸಿ ಹತ್ತಿರ ಇರುವ ತಾಸೆ ಗಲ್ಲಿಯಲ್ಲಿರುವ ಮನೆಯೊಂದರ ಗೋಡೆ ಕುಸಿದು ಓರ್ವ ಯುವಕ ಮೃತಪಟ್ಟ ಘಟನೆ ತಿಳಿಯುತ್ತಿದ್ದಂತೆಯೇ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರ ಪುತ್ರ, ಕಾಂಗ್ರೆಸ್ ಯುವ ನಾಯಕ ಚಿದಾನಂದ ಸವದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಯವಕ ಕಾಶಿನಾಥ್ ಅಪ್ಪಾಸಾಬ ಸುತಾರ್ (23) ಮೃತ ಯುವಕನ ಕುರಿತು ಶೋಕ ವ್ಯಕ್ತಪಡಿಸಿದ ಅವರು ಸರ್ಕಾರದಿಂದ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ಧನ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಥಣಿ ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್‍ಐ ಶಿವಶಂಕರ್ ಮುಕರಿ, ಕಂದಾಯ ನಿರೀಕ್ಷಕ ಎಸ್ ಬಿ ಮೆಣಸಂಗಿ ಗ್ರಾಮ ಆಡಳಿತ ಅಧಿಕಾರಿ ಎಂ ಎಂ ಮಿರ್ಜಿ, ಮುಖಂಡರಾದ ರಾಮನಗೌಡ ಪಾಟೀಲ (ಶಿವನೂರ), ಪುರಸಭೆ ಸದಸ್ಯ ರಾಜು ಬುಲಬುಲೆ, ಶಾಸಕರ ಆಪ್ತ ಸಹಾಯಕ ವಿಜಯ ಮಂಗಸೂಳಿ ಸೇರಿದಂತೆ ಮತ್ತಿತರರು ಇದ್ದರು.