ಗೋಡೆ ಕುಸಿದು ಎತ್ತು ಸಾವು


ಅಣ್ಣಿಗೇರಿ, ಸೆ 24 : ಪಟ್ಟಣದ ಹೊರಕೇರಿ ಓಣಿಯಲ್ಲಿ ಬುಧವಾರ ಸಂಜೆ ಮನೆ ಗೋಡೆ ಕುಸಿದು ಬಿದ್ದು ಎತ್ತು ಸಾವನ್ನಪ್ಪಿದ ಘಟನೆ ನಡೆದಿದೆ.
ಪಟ್ಟಣದ ಶಿವಪ್ಪ ಹಾದಿಮನಿ ಎಂಬ ರೈತರಿಗೆ ಸೇರಿದ ಎತ್ತುಗಳಾಗಿವೆ. ಮಂಗಳವಾರ ಸಾಯಂಕಾಲ ನಿರಂತರವಾಗಿ ಸುರಿದ ಬಾರಿ ಮಳೆಗೆ ಮನೆಯ ಗೋಡೆಗಳು ನೆನೆದು ಬುಧವಾರ ಸಂಜೆ ಹೊತ್ತಿಗೆ ಏಕಾಏಕಿ ಮೇಲ್ಛಾವಣಿ ಮತ್ತು ಗೋಡೆಗಳು ಕುಸಿದಿವೆ.
ಮನೆಯೊಳಗೆ ಇದ್ದ ಎರಡು ಎತ್ತುಗಳು ಮಣ್ಣಿನಡಿಯಲ್ಲಿ ಸಿಲುಕಿ ಉಸಿರುಗಟ್ಟಿ ಅದರಲ್ಲಿ ಒಂದು ಎತ್ತು ಸ್ಥಳದಲ್ಲೆ ಸಾವನ್ನಪ್ಪಿದೆ, ಮತ್ತೊಂದು ಎತ್ತಿನ ಕೋಡು ಮುರಿದು ಗಾಯವಾಗಿದೆ.
ಮೊದಲೆ ಸರಿಯಾಗಿ ಮಳೆ ಬಾರದೇ ಇದ್ದರಿಂದ ಸಂಕಷ್ಟದಲ್ಲಿ ಸಿಲುಕಿದ್ದ ರೈತನಿಗೆ ಗಾಯದ ಮೇಲೆ ಬರೆ ಎಳೆದಂತ್ತಾಗಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ ಮಂಜುನಾಥ ಅಮಾಸಿ, ಪಿಎಸ್‍ಐ ಲಾಲಸಾಬ ಜೂಲಕಟ್ಟಿ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಉಪಸ್ಥಿತರಿದ್ದರು.