ಗೋಡೆಗಳ ಮೇಲೆ ಕೋವಿಡ್ ಜಾಗೃತಿ

ಬಳ್ಳಾರಿ, ಮೇ.29: ನಗರದ ಅಭಯ ಫೌಂಡೇಶನ್ ಅವರು ನಗರದ ಪ್ರಮುಖ ವೃತ್ತದ ಸುತ್ತಮುತ್ತಲಿನ ಮತ್ತು ರಸ್ತೆ ಬದಿಯ ಗೋಡೆಗಳ ಮೇಲೆ ಕೋವಿಡ್ ಜಾಗೃತಿಯ ಚಿತ್ರ ಮತ್ತು ಬರಹವನ್ನು ಬರೆಯುವ ಕಾರ್ಯ ನಿನ್ನೆಯಿಂದ ಆರಂಭಿಸಿದ್ದಾರೆ. ಈ ಕಾರ್ಯ ಜೂನ್ 4 ವರೆಗೆ ನಡೆಯಲಿದೆ.
ಹಲವಾರು ಕಲಾವಿದರು ತಮ್ಮ ಕುಂಚ ಮತ್ತು ಕೈ ಚಳಕದಿಂದ ವರ್ಣಚಿತ್ರ ಚಿತ್ರಗಳನ್ನು ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿನ ಗೋಡೆಗಳ ಮೇಲೆ ಕೋವಿಡ್ ಜಾಗೃತಿ ಮೂಡಿಸುವ ಚಿತ್ರವನ್ನು ಅಂದವಾಗಿ ಬಿಡಿಸಿದ್ದಾರೆ.
ಅಭಯ ಫೌಂಡೇಶನ್‍ನ ಅಧ್ಯಕ್ಷರು ರಾಮಕೃಷ್ಣ ರೆನಿಗುಂಟ್ಲಾ, ನಾಮ ಕಾರ್ತೀಕ್, ಎಚ್.ಆರ್.ಬಾಲನಾಗರಾಜ್, ಜೆ.ಎಸ್.ಅಜಯ್, ಪಿ.ವೇಣುಗೋಪಾಲ್ ಗುಪ್ತಾ, ಎಸ್ ಜಿತೇಂದ್ರ ಪ್ರಸಾದ್. ಜೆ.ಪಿ ಮಂಜುನಾಥ್ ಮೊದಲಾದವರು ಇದರಲ್ಲಿ ತೊಡಗಿಸಿಕೊಂಡಿದ್ದರು.