ಗೋಡಂಬಿ ಪಕೋಡ (ವಿಧಾನ – ೨)

ಬೇಕಾಗುವ ಪದಾರ್ಥಗಳು:
ಕಡ್ಲೆಹಿಟ್ಟು – ಅರ್ಧ ಲೋಟ
ಚಿರೋಟಿರವೆ – ೨ ಚಮಚ
ಅಕ್ಕಿಹಿಟ್ಟು – ೨ ಚಮಚ
ಎಣ್ಣೆ – ೧ ಚಮಚ
ತುಪ್ಪ – ೨ ಚಮಚ
ಗೋಡಂಬಿ – ೧ ಲೋಟ
ಜೀರಿಗೆ – ೧ ಚಮಚ
ಮೆಣಸಿನಕಾಳು – ಅರ್ಧ ಚಮಚ
ಕರಿಬೇವು – ಸ್ವಲ್ಪ
ಶುಂಠಿ – ಸ್ವಲ್ಪ
ಹಸಿಮೆಣಸಿನಕಾಯಿ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಧನಿಯಾಪುಡಿ – ಅರ್ಧ ಚಮಚ
ಕೊತ್ತಂಬರಿಸೊಪ್ಪು – ೧ ಹಿಡಿ
ಸೋಡಾ – ಸ್ವಲ್ಪ
ಕರಿಯಲು ಎಣ್ಣೆ – ಬೇಕಾಗುವಷ್ಟು
ವಿಧಾನ: ಜೀರಿಗೆ, ಮೆಣಸಿನಕಾಳು, ಕರಿಬೇವು, ಶುಂಠಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ ತರಿತರಿಯಾಗುವ ರೀತಿಯಲ್ಲಿ ಪುಡಿಮಾಡಬೇಕು. ಕಡ್ಲೆಹಿಟ್ಟಿಗೆ ಚಿರೋಟಿರವೆ, ಅಕ್ಕಿಹಿಟ್ಟು, ಬಿಸಿಮಾಡಿದ ಎಣ್ಣೆ ಮತ್ತು ತುಪ್ಪ, ಶೇಂಗಾ, ಗೋಡಂಬಿ ಚೂರುಗಳಿಂದ ತಯಾರಿಸಿದ ಒಣಮಸಾಲೆ ಪುಡಿ, ಉಪ್ಪು, ಧನಿಯಾಪುಡಿ, ಕೊತ್ತಂಬರಿಸೊಪ್ಪು, ಸೋಡಾ ಹಾಕಿ. ಹಾಗೆಯೇ ಮೊದಲು ಚೆನ್ನಾಗಿ ಕಲೆಸಿ, (ಅವಶ್ಯಕತೆ ಇದ್ದರೆ ಮಾತ್ರ ಸ್ವಲ್ಪ ನೀರು ಚಿಮುಕಿಸಿ) ಉಂಡೆಮಾಡಿ ಕರಿದರೆ ೧೫ ದಿವಸಗಳ ಕಾಲ ಕೆಡದೆ ಇರುತ್ತದೆ. ಪ್ರಯಾಣಿಸುವಾಗ ತಿನ್ನಲು ಚೆನ್ನಾಗಿರುತ್ತದೆ.